ಶುಕ್ರವಾರ, ಏಪ್ರಿಲ್ 23, 2021
22 °C

ಪವನ್‌ಕುಮಾರ್ ಶವ ನಗರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕದಲ್ಲಿ ಸಾವನ್ನಪ್ಪಿದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪವನ್‌ಕುಮಾರ್ ಶವವನ್ನು ಮಂಗಳವಾರ ರಾತ್ರಿ ನಗರಕ್ಕೆ ತರಲಾಯಿತು.`ಶವವನ್ನು ನಗರಕ್ಕೆ ತರಿಸುವ ಸಂಬಂಧ ಕೆಲ ದಾಖಲೆ ಪತ್ರಗಳಿಗೆ  ಶುಕ್ರವಾರ (ಜು 6) ಸಹಿ ಮಾಡಿ ನ್ಯೂಜೆರ್ಸಿಗೆ ಕಳುಹಿಸಿಲಾಗಿತ್ತು. ಭಾನುವಾರ ಆ ದಾಖಲೆ ಪತ್ರಗಳು ನ್ಯೂಜೆರ್ಸಿ ಪೊಲೀಸರ ಕೈಸೇರಿತ್ತು.ಎಲ್ಲಾ ಪ್ರಕ್ರಿಯೆ ಮುಗಿದು ಪವನ್ ಮೃತದೇಹ 12 ಗಂಟೆ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.`ಆರ್.ಟಿ. ನಗರದಲ್ಲಿರುವ ಪವನ್ ಅಕ್ಕ ಗುಣಶೀಲಾರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ~ ಎಂದರು.  `ಪವನ್‌ನ ಪಾಸ್‌ಪೋರ್ಟ್ ಮತ್ತು ಮರಣ ದೃಢೀಕರಣ ಪತ್ರವನ್ನು ಏರ್‌ಲೈನ್ಸ್ ಅಧಿಕಾರಿಗಳು ನೀಡಿದ್ದಾರೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿದ್ದ ಎನ್ನಲಾದ ಪತ್ರ ಕೈಸೇರಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.