ಶನಿವಾರ, ಮೇ 28, 2022
24 °C

ಪಾಕಿಸ್ತಾನದಲ್ಲಿ ಬಸ್‌ಗೆ ಬೆಂಕಿ : 20 ಮಂದಿ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಬಸ್ಸೊಂದು ಬೆಂಕಿ ಅನಾಹುತಕ್ಕೆ ಸಿಲುಕಿದ ಪರಿಣಾಮ 20 ಮಂದಿ ಸಜೀವ ದಹನವಾದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ ತಡರಾತ್ರಿಯಲ್ಲಿ ಸಂಭವಿಸಿದೆ.ಘಟನೆಯಲ್ಲಿ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ನತದೃಷ್ಟ ಬಸ್‌ನಲ್ಲಿದ್ದವರು ಸಿಯಾಲ್‌ಕೋಟ್‌ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಬಸ್‌ಗೆ ಬೆಂಕಿ ತಗಲುವ ಮುನ್ನ ಸಿಲಿಂಡೆರ್ ಸ್ಫೋಟಿಸಿದ ಸದ್ದು ಕೇಳಿಸಿತು. ಅದರ ಬೆನ್ನಲ್ಲೇ ಬಸ್ ಬೆಂಕಿಯ ಉಂಡೆಯಾಯಿತು ಎಂದು ಟಿವಿ ವಾಹಿನಿಯೊಂದು ತಿಳಿಸಿದೆ.ಪ್ರಯಾಣಿಕರು ಸುಟ್ಟು ಕರಕಲಾಗಿರುವ ಕಾರಣ ಮೃತ ದೇಹಗಳ ಪತ್ತೆಕಾರ್ಯ ಸಾಧ್ಯವಾಗುತ್ತಿಲ್ಲ.  ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಅಗತ್ಯವಾದ ಉಪಕರಣಗಳ ಕೊರತೆ ಇತ್ತು ಎಂದು ರಕ್ಷಣಾ ಪಡೆ ಸಿಬ್ಬಂದಿ ತಿಳಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.