ಮೀರ್ಪುರ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧದ ಗೆಲುವಿನ ದಾಖಲೆಯನ್ನು ಮುಂದುವರಿಸಿದೆ.
ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಏಳು ವಿಕೆಟ್ಗಳ ಸುಲಭ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಮೊಹಮ್ಮದ್ ಹಫೀಜ್ ಬಳಗ ಭಾರತದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿ 20 ಓವರ್ಗಳಲ್ಲಿ 7 ವಿಕೆಟ್ಗೆ 130 ರನ್ ಮಾತ್ರ ಕಲೆಹಾಕಿತು. ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಭಾರತಕ್ಕೆ ಇದು ಸವಾಲಾಗಿ ಪರಿಣಮಿಸಲೇ ಇಲ್ಲ. 18.3 ಓವರ್ಗಳಲ್ಲಿ 3 ವಿಕೆಟ್ಗೆ 131 ರನ್ ಗಳಿಸಿ ಗೆಲುವು ಪಡೆಯಿತು. ಶಿಖರ್ ಧವನ್ (30), ವಿರಾಟ್ ಕೊಹ್ಲಿ (ಅಜೇಯ 36, 32 ಎಸೆತ) ಮತ್ತು ಸುರೇಶ್ ರೈನಾ (ಅಜೇಯ 35, 28 ಎಸೆತ) ಭಾರತದ ಜಯದ ಹಾದಿಯನ್ನು ಸುಗಮಗೊಳಿಸಿದರು.

ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದಲ್ಲಿ ನಿರೀಕ್ಷಿಸಿದಷ್ಟು ರೋಚಕತೆ ಇರಲಿಲ್ಲ. ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಎದುರಾಳಿ ತಂಡವನ್ನು ಹಿಮ್ಮೆಟ್ಟಿಸಿತು. ಟ್ವೆಂಟಿ-20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಒಮ್ಮೆಯೂ ಪಾಕಿಸ್ತಾನದ ಎದುರು ಸೋಲು ಅನುಭವಿಸಿಲ್ಲ. ಈ ಅಜೇಯ ದಾಖಲೆ ಮತ್ತೆ ಮುಂದುವರಿದಿದೆ.

ಬಾಂಗ್ಲಾದಲ್ಲಿ ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿತ್ತು. ಆ ಸೋಲಿಗೆ ಇದೀಗ ಮುಯ್ಯಿ ತೀರಿಸಿಕೊಳ್ಳಲು ಭಾರತ ಯಶಸ್ವಿಯಾಯಿತು.

ಮಿಂಚಿದ ಬೌಲರ್ಗಳು: ಟಾಸ್ ಗೆದ್ದ ದೋನಿ ಫೀಲ್ಡಿಂಗ್ ಆಯ್ದುಕೊಳ್ಳಲು ಎರಡು ಬಾರಿ ಯೋಚಿಸಲಿಲ್ಲ. ಭಾರತದ ಸ್ಪಿನ್ ದಾಳಿಯ ಮುಂದೆ ಮೊಹಮ್ಮದ್ ಹಫೀಜ್ ಬಳಗ ಪರದಾಟ ನಡೆಸಿತು. ‘ಪಂದ್ಯಶ್ರೇಷ್ಠ‘ ಎನಿಸಿಕೊಂಡ ಅಮಿತ್ ಮಿಶ್ರಾ (22ಕ್ಕೆ 2) ಪಾಕ್ ತಂಡವನ್ನು ಕಾಡಿದರು. ರವೀಂದ್ರ ಜಡೇಜ ನಾಲ್ಕು ಓವರ್ಗಳಲ್ಲಿ 18 ರನ್ ನೀಡಿ ಒಂದು ವಿಕೆಟ್ ಪಡೆದರು.

ಎರಡು ಬೌಂಡರಿಗಳ ಮೂಲಕ ಭರವಸೆ ಮೂಡಿಸಿದ್ದ ಕಮ್ರನ್ ಅಕ್ಮಲ್ (8) ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ಅವರು ರನೌಟಾದರು.

ಅಹ್ಮದ್ ಶೆಹಜಾದ್ (22, 17 ಎಸೆತ) ಮತ್ತು ಮೊಹಮ್ಮದ್ ಹಫೀಜ್ (15, 22 ಎಸೆತ) ಎರಡನೇ ವಿಕೆಟ್ಗೆ 35 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ ಇವರಿಗೆ ವೇಗವಾಗಿ ರನ್ ಗಳಿಸಲು ಆಗಲಿಲ್ಲ.

ಉಮರ್ ಅಕ್ಮಲ್ (33, 30 ಎಸೆತ, 2 ಬೌಂ) ಮತ್ತು ಶೋಯಬ್ ಮಲಿಕ್ (18, 20 ಎಸೆತ) ಮೂರನೇ ವಿಕೆಟ್ಗೆ 50 ರನ್ಗಳನ್ನು ಸೇರಿಸಿದರು. ರನ್ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ಇಬ್ಬರೂ ಔಟಾದರು. ಶಾಹಿದ್ ಅಫ್ರಿದಿಯ (8) ಅಬ್ಬರ ನಡೆಯದ ಕಾರಣ ಕೊನೆಯ ಓವರ್ಗಳಲ್ಲೂ ತಂಡಕ್ಕೆ ವೇಗವಾಗಿ ರನ್ ಗಳಿಸಲು ಆಗಲಿಲ್ಲ.

ಬೌಲಿಂಗ್ನಲ್ಲಿ ಪದೇ ಪದೇ ಬದಲಾವಣೆ ತಂದ ದೋನಿ ಎದುರಾಳಿ ಬ್ಯಾಟ್ಸ್ಮನ್ಗಳು ಸುಲಭವಾಗಿ ರನ್ ಗಳಿಸದಂತೆ ನೋಡಿಕೊಂಡರು. ಅಫ್ರಿದಿ ಮತ್ತು ಉಮರ್ ಅಕ್ಮಲ್ ಒಳಗೊಂಡಂತೆ ಪಾಕ್ ತಂಡದ ಬ್ಯಾಟ್ಸ್ಮನ್ಗಳಿಗೆ ರಟ್ಟೆಯರಳಿಸಲು ಭಾರತದ ಬೌಲರ್ಗಳು ಅವಕಾಶವನ್ನೇ ನೀಡಲಿಲ್ಲ.

ಉತ್ತಮ ಅರಂಭ: ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮ (24, 21 ಎಸೆತ, 1 ಬೌಂ, 2 ಸಿಕ್ಸರ್) ಮತ್ತು ಧವನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 8 ಓವರ್ಗಳಲ್ಲಿ 54 ರನ್ಗಳು ಬಂದವು.

ನಾಯಕ ಹಫೀಜ್ ತನ್ನ ಪ್ರಮುಖ ‘ಅಸ್ತ್ರ’ ಎನಿಸಿರುವ ಸಯೀದ್ ಅಜ್ಮಲ್ಗೆ ಬೇಗನೇ ಚೆಂಡು ನೀಡಿದರು. ಆದರೆ ಅವರು ಎಸೆದ ಇನಿಂಗ್ಸ್ನ ಐದನೇ ಓವರ್ನಲ್ಲಿ ಮೂರು ಬೌಂಡರಿ ಸಿಡಿಸಿದ ಶಿಖರ್ ಧವನ್ ಭಾರತ ತಂಡದ ಉದ್ದೇಶ ಏನೆಂಬುದನ್ನು ಎದುರಾಳಿಗಳಿಗೆ ಸ್ಪಷ್ಟಪಡಿಸಿದರು.

28 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟ್ಸ್ಮನ್ 5 ಬೌಂಡರಿ ಸಿಡಿಸಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ರೋಹಿತ್ ಎರಡು ಸಿಕ್ಸರ್ಗಳನ್ನು ಸಿಡಿಸಿ ಎದುರಾಳಿ ಬೌಲರ್ಗಳ ಮೇಲೆ ಒತ್ತಡ ಹೇರಿದರು.

ಧವನ್ ವಿಕೆಟ್ ಪಡೆದ ಉಮರ್ ಗುಲ್ ಪಾಕ್ಗೆ ಮೊದಲ ಯಶಸ್ಸು ತಂದಿತ್ತರು. ಆ ಬಳಿಕ ಭಾರತ ಅಲ್ಪ ಕುಸಿತ ಅನುಭವಿಸಿತು. ರೋಹಿತ್ ಅವರನ್ನು ಸಯೀದ್ ಅಜ್ಮಲ್ ‘ಕ್ಲೀನ್ಬೌಲ್ಡ್’ ಮಾಡಿದರೆ, ಯುವರಾಜ್ ಸಿಂಗ್ (1) ಬೇಗನೇ ಔಟಾದರು.

11 ರನ್ಗಳ ಅಂತರದಲ್ಲಿ ಮೂರು ವಿಕೆಟ್ಗಳು ಪತನಗೊಂಡವು. ಈ ಹಂತದಲ್ಲಿ ಪಾಕಿಸ್ತಾನ ಬೌಲರ್ಗಳಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ ರೈನಾ ಮತ್ತು ಕೊಹ್ಲಿ ಅದಕ್ಕೆ ಅವಕಾಶ ನೀಡಲಿಲ್ಲ.

ಆಕರ್ಷಕ ಆಟ ತೋರಿದ ಇವರು ಮುರಿಯದ ನಾಲ್ಕನೇ ವಿಕೆಟ್ಗೆ 66 ರನ್ ಸೇರಿಸಿ ಭಾರತವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು. ಪಾಕ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಇವರಿಬ್ಬರು ತಲಾ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.

ಭಾರತ ತಂಡ ಇದೇ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೈಪೋಟಿ ನಡೆಸಲಿದೆ.

ಸ್ಕೋರು ವಿವರ
ಪಾಕಿಸ್ತಾನ: 20 ಓವರ್ಗಳಲ್ಲಿ 7 ವಿಕೆಟ್ಗೆ 130

ಕಮ್ರನ್ ಅಕ್ಮಲ್ ರನೌಟ್ 08
ಅಹ್ಮದ್ ಶೆಹಜಾದ್ ಸ್ಟಂಪ್ ದೋನಿ ಬಿ ಅಮಿತ್ ಮಿಶ್ರಾ 22
ಮೊಹಮ್ಮದ್ ಹಫೀಜ್ ಸಿ ಭುವನೇಶ್ವರ್ ಬಿ ರವೀಂದ್ರ ಜಡೇಜ 15
ಉಮರ್ ಅಕ್ಮಲ್ ಸಿ ರೈನಾ ಬಿ ಮೊಹಮ್ಮದ್ ಶಮಿ 33
ಶೋಯಬ್ ಮಲಿಕ್ ಸಿ ರೈನಾ ಬಿ ಅಮಿತ್ ಮಿಶ್ರಾ 18
ಶಾಹಿದ್ ಅಫ್ರಿದಿ ಸಿ ರೈನಾ ಬಿ ಭುನವೇಶ್ವರ್ ಕುಮಾರ್ 08
ಸೊಹೈಬ್ ಮಕ್ಸೂದ್ ರನೌಟ್ 21
ಬಿಲಾವಲ್ ಭಟ್ಟಿ ಔಟಾಗದೆ 00
ಇತರೆ: (ಲೆಗ್ಬೈ-2, ವೈಡ್-3) 05
ವಿಕೆಟ್ ಪತನ: 1-9 (ಕಮ್ರನ್; 1.5), 2-44 (ಹಫೀಜ್; 7.3), 3-47 (ಶೆಹಜಾದ್; 8.2), 4-97 (ಮಲಿಕ್; 15.2), 5-103 (ಉಮರ್ ಅಕ್ಮಲ್; 17.2), 6-114 (ಅಫ್ರಿದಿ; 18.5), 7-130 (ಮಕ್ಸೂದ್; 19.6)
ಬೌಲಿಂಗ್: ಆರ್. ಅಶ್ವಿನ್ 4-0-23-0, ಭುವನೇಶ್ವರ್ ಕುಮಾರ್ 3-0-21-1, ಮೊಹಮ್ಮದ್ ಶಮಿ 4-0-31-1, ಅಮಿತ್ ಮಿಶ್ರಾ 4-1-22-2, ರವೀಂದ್ರ ಜಡೇಜ 4-0-18-1, ಯುವರಾಜ್ ಸಿಂಗ್ 1-0-13-0

ಭಾರತ: 18.3 ಓವರ್ಗಳಲ್ಲಿ 3 ವಿಕೆಟ್ಗೆ 131
ರೋಹಿತ್ ಶರ್ಮ ಬಿ ಸಯೀದ್ ಅಜ್ಮಲ್ 24
ಶಿಖರ್ ಧವನ್ ಸಿ ಅಜ್ಮಲ್ ಬಿ ಉಮರ್ ಗುಲ್ 30
ವಿರಾಟ್ ಕೊಹ್ಲಿ ಔಟಾಗದೆ 36
ಯುವರಾಜ್ ಸಿಂಗ್ ಬಿ ಬಿಲಾವಲ್ ಭಟ್ಟಿ 01
ಸುರೇಶ್ ರೈನಾ ಔಟಾಗದೆ 35
ಇತರೆ: (ವೈಡ್-5) 05
ವಿಕೆಟ್ ಪತನ: 1-54 (ಧವನ್; 7.6), 2-64 (ರೋಹಿತ್; 9.3), 3-65 (ಯುವರಾಜ್; 10.1)
ಬೌಲಿಂಗ್: ಮೊಹಮ್ಮದ್ ಹಫೀಜ್ 3-0-14-0, ಜುನೈದ್ ಖಾನ್ 3-0-23-0, ಸಯೀದ್ ಅಜ್ಮಲ್ 4-0-18-1, ಉಮರ್ ಗುಲ್ 3.3-0-35-1, ಶಾಹಿದ್ ಅಫ್ರಿದಿ 3-0-24-0, ಬಿಲಾವಲ್ ಭಟ್ಟಿ 2-0-17-1
ಫಲಿತಾಂಶ: ಭಾರತಕ್ಕೆ 7 ವಿಕೆಟ್ ಗೆಲುವು ಹಾಗೂ ಎರಡು ಪಾಯಿಂಟ್
ಪಂದ್ಯಶ್ರೇಷ್ಠ: ಅಮಿತ್ ಮಿಶ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.