ವಿಜಾಪುರ: ಇಲ್ಲಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮೋಟಾರ್ ವಾಹನ ಇನ್ಸ್ಪೆಕ್ಟರೊಬ್ಬರು ಪಾನಮತ್ತನಾಗಿ ನಗರದಲ್ಲಿ ಬೆತ್ತಲೆ ತಿರುಗಿ ರಾದ್ಧಾಂತ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

`ಕುಡಿದ ಅಮಲಿನಲ್ಲಿ ಬಟ್ಟೆ ಬಿಚ್ಚಿ ರಾದ್ಧಾಂತ ಮಾಡಿದ ಅಧಿಕಾರಿ ಟಿ.ಆರ್.ಕೆ. ಕುಮಾರ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದರು.

ಬೆಂಗಳೂರು ಮೂಲದ ಈ ಅಧಿಕಾರಿ ಹೋಳಿ ಹಬ್ಬದ ದಿನವಾದ ಶುಕ್ರವಾರ ಕುಡಿದು ಜೋಲಿ ಹೊಡೆಯುತ್ತ ಇಲ್ಲಿಯ ಕೋರ್ಟ್ ಸಂಕೀರ್ಣದ ಎದುರು ಬಂದರು. ತಾನು ತೊಟ್ಟಿದ್ದ ಅಂಗಿಯನ್ನು ಕಳಚಿ, ವಿಚಿತ್ರವಾಗಿ ವರ್ತಿಸಲಾರಂಭಿಸಿದ ಇವರನ್ನು ಗಮನಿಸಿದ ಸಾರ್ವಜನಿಕರು ತಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.

ಅಷ್ಟೊತ್ತಿಗಾಗಲೇ ಕುಮಾರ ಪೂರ್ಣ ಬೆತ್ತಲಾಗಿ ತಾನು ಕಾರ್ಯ ನಿರ್ವಹಿಸುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಎದುರು ಬಂದು ಅಲ್ಲಿಯೂ ಕೂಗಾಟ-ಚೀರಾಟ ನಡೆಸಿದರು. ಅಷ್ಟೊತ್ತಿಗಾಗಲೆ ಅಲ್ಲಿಗೆ ಬಂದ ಪೊಲೀಸರು ಅವರನ್ನು ಗಾಂಧಿಚೌಕ್ ಠಾಣೆಗೆ ಕರೆದೊಯ್ದರು.

ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿಯೂ ಆತ ಬೆತ್ತಲಾಗಿ ಹೊರಳಾಡಲಾರಂಭಿಸಿದ. ರಂಪಾಟ ನಡೆಸಿದರು. ಆಗ ಪೊಲೀಸರು ಅವರನ್ನು ಹೊತ್ತೊಯ್ದು ಕೈಗೆ ಬೇಡಿ ಹಾಕಿ ಕೂಡ್ರಿಸಿದರು.ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಜೇಮ್ಸ, ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ಅವರೊಂದಿಗೂ ಅನುಚಿತವಾಗಿ ವರ್ತಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

`ಎರಡು ದಿನಗಳಿಂದ ಕುಮಾರ ಅವರು ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡಿದ್ದು, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದರಿಂದ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ~ ಎಂದು ಟ್ರಾಸ್ಗರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.