ಹುಕ್ಕೇರಿ: ಜ್ಞಾನಪೀಠ ಪ್ರಶಸ್ತಿ ಪಡೆ ಯುವಲ್ಲಿ ಡಾ.ಚಂದ್ರಶೇಖರ ಕಂಬಾರ ರಿಗಿಂತ ಕಾದಂಬರಿಕಾರ ಎಸ್.ಎಲ್.ಬೈರಪ್ಪ ಅವರೆ ಸೂಕ್ತ ಎಂಬ ಹೇಳಿಕೆ ಯನ್ನು ನೀಡಿದ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರ ಆಕ್ಷೇಪದ ಅಭಿಪ್ರಾಯವನ್ನು ಡಾ.ಕಂಬಾರರ ಊರಲ್ಲಿ ಬುಧವಾರ ಹಮ್ಮಿಕೊಂಡ `ಅಭಿನಂದನಾ ಸಭೆ~ ಯಲ್ಲಿ ಖಂಡಿಸಲಾಯಿತು.

ಗ್ರಾಮದ ವತಿಯಿಂದ ಡಾ. ಚಂದ್ರ ಶೇಖರ ಕಂಬಾರರ ಮನೆಯ ಮುಂದೆ ಹಮ್ಮಿಕೊಂಡ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೆಕಾಂತ ಭೂಷಿ ಮಾತನಾಡಿ ಡಾ.ಪಾಟೀಲ ಪುಟ್ಟಪ್ಪನ ವರು ಡಾ. ಕಂಬಾರರ ವಿರುದ್ಧ ನೀಡಿದ ಹೇಳಿಕೆ ಅವರ ಸಣ್ಣತನವನ್ನು ಪ್ರದರ್ಶಿಸಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೆಯ ವ್ಯಕ್ತಿ ಡಾ. ಚಂದ್ರಶೇಖರ ಕಂಬಾರ ಆಗಿದ್ದು, ಅದನ್ನು ಹೆಮ್ಮೆ ಪಡುವ ಬದಲು ತಮ್ಮ ಯೋಗ್ಯತೆಗೆ ಅಗೌರವ ಹೇಳಿಕೆ ನೀಡಿದ್ದು ವಿಷಾದನೀಯ ಎಂದರು.
ಆಗ್ರಹ: ಡಾ. ಪಾಟೀಲ ಪುಟ್ಟಪ್ಪ ನವರು ಡಾ. ಕಂಬಾರರ ವಿರುದ್ಧ ನೀಡಿದ ಹೇಳಿಕೆ ವಾಪಸ್ ಪಡೆಯ ಬೇಕೆಂದು ಆಗ್ರಹಿಸಲಾಯಿತು.

ಉಪಾಧ್ಯಕ್ಷ ಮಲ್ಲಪ್ಪ ಮುಗಳಿ ಒಳ ಗೊಂಡು ಗ್ರಾಮ ಪಂಚಾಯಿತಿ ಸದ ಸ್ಯರು, ಹಿರಿಯರು ಮತ್ತು ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.