ಬುಧವಾರ, ಜೂನ್ 23, 2021
23 °C

ಪಾಲಿಕೆ ಉಪ ಚುನಾವಣೆ: ಶೇ 48.47 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹಾನಗರ ಪಾಲಿಕೆ 19ನೇ ವಾರ್ಡ್‌ಗೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಶೇ 48.47ರಷ್ಟು ಮತದಾನವಾಗಿದೆ.ಬೆಳಿಗ್ಗೆ 7ರಿಂದ ಸಂಜೆ 5ರವರೆಗೂ ಮತದಾನ ನಡೆಯಿತು. ಬೆಳಿಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ನಂತರ ಸ್ವಲ್ಪಮಟ್ಟಿಗೆ ಮತದಾನ ಬಿರುಸುಗೊಂಡಿತು.19ನೇ ವಾರ್ಡ್‌ನ ಸಾವಿತ್ರಮ್ಮ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಹೀಗಾಗಿ, ಉಪ ಚುನಾವಣೆ ನಡೆಯಿತು. ಜೆಡಿಎಸ್‌ನಿಂದ ದಿಲ್‌ಶಾದ್‌ ಖಾನಂ ದಾದಾಪೀರ್‌, ಕಾಂಗ್ರೆಸ್‌ನಿಂದ ಆಶಾ ಉಮೇಶ್‌ ಹಾಗೂ ಬಿಜೆಪಿಯಿಂದ ಬಸಮ್ಮ ಎಚ್‌.ಡಿ.ಹನುಮಂತಪ್ಪ ಸ್ಪರ್ಧಿಸಿದ್ದರು.ಬಂದೋಬಸ್ತ್‌: ವಾರ್ಡ್‌ನ ಮತಗಟ್ಟೆಗಳಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.ಮಾರ್ಚ್‌ 5ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.