ಸಿಂದಗಿ: ಸ್ಥಳೀಯ ಪೋಲಿಸ್ ಠಾಣೆ ಪಿಎಸ್ಐ ರಮೇಶ ರೊಟ್ಟಿ ವಕೀಲರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವಕೀಲರ ಸಂಘದ 32 ಸದಸ್ಯರು ತಹಸೀಲ್ದಾರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

‘ಶುಕ್ರವಾರ ಠಾಣೆಗೆ ಕಾರ್ಯ ನಿಮಿತ್ತ ತೆರಳಿದ ಎ.ಎಂ. ಅಂಗಡಿ ಅವರೊಂದಿಗೆ ಪಿಎಸ್ಐ ರೊಟ್ಟಿ ತೀರ ಅಸಭ್ಯವಾಗಿ ವರ್ತಿಸಿದ್ದಾರೆ. ಅದೇ ರೀತಿ ಆರ್.ಡಿ. ಅಮ್ಮನಗೋಳ, ವಿ.ಎಂ. ಹುಲ್ಲಿಕೇರಿ, ಎಸ್.ಎಂ. ಹಿರೇಮಠ, ಎಂ.ಬಿ.ನಾಯ್ಕೋಡಿ ಈ ಎಲ್ಲ ವಕೀಲರೊಂದಿಗೆ ಪ್ರತ್ಯೇಕ ಘಟನೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ವಕೀಲರ ಸಂಘದ ಸದಸ್ಯರು ದೂರಿದ್ದಾರೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ, ‘ರೊಟ್ಟಿ ಅವರು ಕೇವಲ ವಕೀಲರ ಜೊತೆ ಮಾತ್ರವಲ್ಲದೇ ಸಾರ್ವಜನಿಕರ ಮೇಲೂ ತುಂಬಾ ದೌರ್ಜನ್ಯ ಮಾಡುತ್ತಿದ್ದಾರೆ. ವಕೀಲರು ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣೆಗೆ ಹೋದರೆ ಅತ್ಯಂತ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರೆ. ಹೀಗಾಗಿ ಸಬ್ ಇನ್ಸ್ಪೆಕ್ಟರ್ ರೊಟ್ಟಿ ಅವರನ್ನು ಮೇಲಾಧಿಕಾರಿಗಳು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ ಶಿವಾನಂದ ಭಜಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಕೀಲರಾದ ಎಸ್.ಬಿ. ಪಾಟೀಲ, ಡಿ.ಜಿ. ಕಕ್ಕಳಮೇಲಿ, ಎಂ.ಎನ್. ನಾಯ್ಕೋಡಿ, ಡಿ.ಎಲ್. ಬಂಡಿವಡ್ಡರ, ಎಂ.ಬಿ. ನಾಯ್ಕೋಡಿ, ಆರ್.ಬಿ. ಚವ್ಹಾಣ, ಬಿ.ಎಸ್. ಮಠ, ಎಸ್.ಜಿ. ಯಳವಂತಗಿ, ಆರ್.ಡಿ. ಅಮ್ಮನಗೋಳ, ಎಂ.ಎನ್. ಪಾಟೀಲ, ವಿ.ಎಂ. ಹುಲ್ಲಿಕೇರಿ, ಆರ್.ವಿ. ಸುಣಗಾರ, ಎ.ಎಂ. ಅಂಗಡಿ, ಎಸ್.ಕೆ. ಪೂಜಾರಿ, ಆರ್.ಎಸ್. ಸಿಂದಗಿ, ಬಿ.ಬಿ. ಕುಮಸಗಿ, ಎನ್.ಜಿ. ಪಾಟೀಲ, ಸಿ.ಎಂ. ಸೂರ್ಯವಂಶಿ, ಬಿ.ಸಿ. ಪಾಟೀಲ, ಪಿ.ಎಸ್. ಬಿರಾದಾರ, ಎಸ್.ಸಿ. ಪೂಜಾರಿ, ಪಿ.ಎಂ. ಹೊಸಮನಿ, ಜಿ.ವೈ. ಬಾಣಿ, ಬಿ.ಸಿ. ಕೊಣ್ಣೂರ, ಎ.ಎ. ಮುಲ್ಲಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.