ಅರಸೀಕೆರೆ: ನಗರದ ರಸ್ತೆಗಳಲ್ಲಿ ದಿನನಿತ್ಯ ಜಾನುವಾರುಗಳು ವಾಹನಗಳಿಗೆ ಸಿಲುಕಿ ಗಾಯಗೊಳ್ಳುತ್ತಿವೆ. ಈ ವಿಚಾರ ಗಮನಕ್ಕೆ ತಂದಿದ್ದರೂ ಪುರಸಭೆ ಮುಖ್ಯಾಧಿಕಾರಿ ಹಾಗೂ ನೌಕರರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು.

ನಗರ ಬಿಜೆಪಿ ಕಾರ್ಯದರ್ಶಿ ನವೀನ ಕಟ್ಟೆಹಳ್ಳಿ, ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಗೌಡ, ಕಾರ್ಯ ದರ್ಶಿ ಬಾಣಾವರ ವಿರೂಪಾಕ್ಷ, ಶ್ರೀಧರ್, ವಿಶ್ವ ಹಿಂದೂ ಪರಿಷತ್ ಮುಖಂಡ ನಾಗರಾಜ್ ಹೆಬ್ಬಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎರಡು ಹಸುಗಳನ್ನು ಪಟ್ಟಣದ ಪಿ.ಪಿ ವೃತ್ತದಲ್ಲಿರಿಸಿ ಪ್ರತಿ ಭಟನೆ ನಡೆಸಿದರು. ನವೀನ ಕಟ್ಟೆಹಳ್ಳಿ ಮಾತನಾಡಿ, ಪಟ್ಟಣದ ಕಸಾಯಿಖಾನೆಗಳಲ್ಲಿ ಜಾನು ವಾರು ಹತ್ಯೆ ರಾಜಾರೋಷವಾಗಿ ನಡೆ ಯುತ್ತಿದೆ ಎಂದು ಆರೋಪಿಸಿದರು.

ರಸ್ತೆಗಳಲ್ಲಿ ಬಿಡಾಡಿ ದನಗಳು ನಿರ್ಭಯವಾಗಿ ಸಂಚರಿಸಿ ಪ್ರಯಾ ಣಕ್ಕೆ ತೊಂದರೆ ಉಂಟುಮಾಡುತ್ತಿವೆ. ಇದರಿಂದ ಜಾನುವಾರುಗಳಿಗೆ ಮಾತ್ರ ವಲ್ಲ ಅಪಘಾತ ಸಂಭವಿಸಿ ಸಾರ್ವಜ ನಿಕರೂ ತೊಂದರೆಗೆ ಒಳಗಾಗಿದ್ದಾರೆ. ಈ ವಿಚಾರ ತಿಳಿದಿದ್ದರೂ ಪುರಸಭೆ ಆಡಳಿತ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.