ಶನಿವಾರ, ಆಗಸ್ಟ್ 8, 2020
22 °C

ಪುರಾತನ ವಿಗ್ರಹಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಾತನ ವಿಗ್ರಹಗಳ ವಶ

ಭಟ್ಕಳ: ಪುರಾತನ ವಿಗ್ರಹಗಳನ್ನು ವಿದೇಶಕ್ಕೆ ಸಾಗಿಸಲು ಯತ್ನಿಸಿದ ಐವರನ್ನು ಡಿವೈಎಸ್‌ಪಿ ಎಂ.ನಾರಾಯಣ, ಇನ್‌ಸ್ಪೆಕ್ಟರ್ ಶಿವಪ್ರಕಾಶ ನೇತೃತ್ವದ ಪೊಲೀಸ್ ತಂಡ,  ಬುಧವಾರ ಬಂಧಿಸಿ ಮುರ್ಡೇಶ್ವರದ ಹೋಟೆಲೊಂದರಿಂದ 12 ಕೆ.ಜಿ ತೂಕದ ನಟರಾಜ ಮೂರ್ತಿ ಹಾಗೂ 4 ಕೆ.ಜಿ. ತೂಕದ ಆದಿ ಪರಾಶಕ್ತಿ ದೇವರ ಮೂರ್ತಿಗಳನ್ನು ವಶಪಡಿಸಿಕೊಂಡಿದೆ.ಬಂಧಿತರನ್ನು ಭಟ್ಕಳದ ಸುಲ್ತಾನ್ ಸ್ಟ್ರೀಟ್‌ನ ಹಬೀಬ್, ಗೌಸಿಯಾ ಸ್ಟ್ರೀಟ್‌ನ ಸಲೀಂ ಮಹ್ಮದ್ ಗೌಸ್,  ಕುಂದಾಪುರ ತಾಲ್ಲೂಕಿನ ರಾಜೇಶ ರಾವ್, ಮಂಜುನಾಥ  ಶೇಟ್ ಹಾಗೂ ಕುಂದಾಪುರದ ಕಂಡ್ಲೂರ್‌ನ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.