ಪುರುಷರಿಗೆ ತಮಗೊಪ್ಪುವ ವಸ್ತ್ರವಿನ್ಯಾಸ ಏನೆಂದು ತಿಳಿಯಲು ಬರೋಬ್ಬರಿ 37 ವರ್ಷಗಳು ಬೇಕಂತೆ. ಹೀಗೆಂದು ಹೇಳುತ್ತದೆ ಹೊಸತೊಂದು ಅಧ್ಯಯನ. ನೆಟ್ವೋಚರ್ಕೋಡ್ಸ್.ಕೊ.ಯುಕೆ (netvouchercodes.co.uk)ಎಂಬ ಹಣ ಉಳಿತಾಯ ಅಂತರಜಾಲ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಇಂಥದ್ದೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ 37ರ ಒಳಗಿನ ಪುರುಷರಿಗೆ ತಮಗೊಪ್ಪುವ ವಸ್ತ್ರ ಯಾವುದು ಎಂಬ ಗೊಂದಲ ಇನ್ನೂ ಕಾಡುತ್ತಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ. ಪುರುಷರು ಅಂಗಡಿಗೆ ಹೋದರೆ ತಮಗೆ ಎಂಥ ಬಟ್ಟೆ ಬೇಕೆಂಬ ಗೊಂದಲ ಮೂಡುತ್ತದೆ ಎಂಬ ಅಂಶ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ಆರರಲ್ಲಿ ಒಬ್ಬ ಪುರುಷ ಹೇಳುವಂತೆ, ‘ವಸ್ತ್ರ ವಿನ್ಯಾಸಕ್ಕಿಂತ ಹೆಚ್ಚಾಗಿ ಬೇಗ ಶಾಪಿಂಗ್ ಪ್ರಕ್ರಿಯೆ ಮುಗಿಯಬೇಕೆಂದು ಕೈಗೆ ಸಿಕ್ಕ ಹಾಗೂ ಕಣ್ಣಿಗೆ ಚೆಂದ ಕಾಣುವ ವಸ್ತ್ರಗಳನ್ನು ಆಯ್ಕೆ ಮಾಡಿ ಶಾಪಿಂಗ್ ಶಾಸ್ತ್ರ ಮುಗಿಸುತ್ತೇವೆ’ ಎಂದಿದ್ದಾರೆ. ಉಳಿದಂತೆ ಕಾಲು ಭಾಗಕ್ಕಿಂತ ಹೆಚ್ಚಿನ ಪುರುಷರು ಈಗಾಗಲೇ ಬಂದು ಹೋದ ಫ್ಯಾಷನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಲೇಸು ಎಂದುಕೊಳ್ಳುತ್ತಾರಂತೆ.

ಇದೇ ವಯೋಮಾನದ ಪುರುಷರಲ್ಲಿ ಹಲವರು ತಮ್ಮ ಬಟ್ಟೆ ಖರೀದಿಯಲ್ಲಿ ಸಹಕರಿಸಲು ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗುತ್ತಾರಂತೆ. ಇನ್ನು ಕೆಲವರು ಸಿನಿಮಾ ಹಾಗೂ ಸೆಲೆಬ್ರಿಟಿಗಳ ವಸ್ತ್ರ ವಿನ್ಯಾಸವನ್ನು ಅನುಕರಿಸುತ್ತಾರಂತೆ.

ಸಮೀಕ್ಷೆ ನಡೆಸಿದ ತಂಡದ ಮುಖ್ಯಸ್ಥೆ ಅನಿತಾ ನಾಯ್ಕ್ ಅವರ ಪ್ರಕಾರ ‘ಮಹಿಳೆಯರಿಗೆ ಹೋಲಿಸಿದಲ್ಲಿ ತಾವು ತೊಡುವ ವಸ್ತ್ರವಿನ್ಯಾಸದಲ್ಲಿ ಪುರುಷರಿಗೇ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ. ಆದರೂ 37 ವರ್ಷ ಕೊಂಚ ದೂರವಾಯಿತು. ಕೆಲವು ಬ್ರಾಂಡ್ಗಳಿಗೆ ಮೊರೆಹೋಗುವುದರಿಂದ ಬದಲಾಗುವ ವಸ್ತ್ರವಿನ್ಯಾಸದ ಆಯ್ಕೆಗಾಗಿ ಪರದಾಡಬೇಕಾಗಿಲ್ಲ’ ಎಂದು ತಿಳಿಸುತ್ತಾರೆ.

ಹಾಲಿವುಡ್ನ ಬೆನಡಿಕ್ಟ್ ಕುಂಬರ್ಬ್ಯಾಚ್ ಹಾಗೂ ಕೊಲಿನ್ ಫಾರೆಲ್ ಎಂಬ ನಟರು ತಮ್ಮ ವಿನ್ಯಾಸದಲ್ಲಿ ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರಂತೆ. ಏಕೆಂದರೆ ಇವರಿಬ್ಬರು ತೊಡುವ ಬಟ್ಟೆಗಳು ಕಾಲಕಾಲಕ್ಕೆ ಬದಲಾಗುವುದರ ಜತೆಗೆ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುವಂತಿರುತ್ತವೆ ಎಂಬುದು ಫ್ಯಾಷನ್ ಪಂಡಿತರ ವಿಶ್ಲೇಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.