ಶನಿವಾರ, ಆಗಸ್ಟ್ 15, 2020
26 °C

ಪೆರೇಡ್ ಮೂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆರೇಡ್ ಮೂಡ್

ಒಂದೇ ಲಯದ ಬೂಟಿನ ಸಪ್ಪಳ. ಸೆಟೆದ ಎದೆಗಳಲ್ಲಿ ಬಸಿದ ಬೆವರು ಬೆಳೆದ ಆತ್ಮವಿಶ್ವಾಸ. ತೂಕದ ಬಂದೂಕುಗಳನ್ನು ಹಿಡಿದು ಬಾಗುವಾಗಲೂ ಎಲ್ಲರದ್ದೂ ಒಂದೇ ಲಯ-ಗತಿ. ಉತ್ತರಾಖಂಡದಲ್ಲಿ ಪ್ರವಾಹ ಬಂದಿತ್ತಲ್ಲ; ಅಂಥ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರನ್ನು ರಕ್ಷಿಸುವುದು ಹೇಗೆ ಎಂದು ಕೇಂದ್ರ ಮೀಸಲು ಪಡೆಯವರಿಗೆ ತರಬೇತಿ ನೀಡಲಾಗುತ್ತದೆ.ಅದು ತರಬೇತಿಯ ಒಂದು ಭಾಗವಷ್ಟೆ. ಅಂಥ ಹಲವು ಸವಾಲುಗಳಿಗೆ ಎದುರಾಗಿ ನಿಲ್ಲಬಲ್ಲ ಗಂಡೆದೆಯನ್ನು ಈ ತರಬೇತಿ ಮೂಡಿಸುತ್ತದೆ. ಹೀಗೆ ತರಬೇತಿ ಮುಗಿಸಿದ ಸುಮಾರು 942 ಕೆಡೆಟ್‌ಗಳು ನಗರದ ಯಲಹಂಕದಲ್ಲಿ ಮಂಗಳವಾರ (ಜುಲೈ 9) ಪೆರೇಡ್ ಮಾಡಿದರು. ಕಸರತ್ತುಗಳನ್ನು ಪ್ರದರ್ಶಿಸಿದರು.ಆ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾದವರ ನಡುವೆ ಪುಟ್ಟ ಕಂದಮ್ಮ ಎದ್ದುಕಾಣುತ್ತಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.