ಭಾನುವಾರ, ಜನವರಿ 19, 2020
27 °C

ಪೊಲೀಸರಿಂದ ದೌರ್ಜನ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ನಿವೇಶನ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಶಹರ ಠಾಣೆ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ” ಎಂದು ದೈವಜ್ಞ ಹೌಸಿಂಗ್ ಸೊಸೈಟಿ ಅಧ್ಯಕ್ಷ ಉತ್ತಮ ಪಾಲನಕರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.`ಈ ಕುರಿತು ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಸಹ ನಮ್ಮ ಮೇಲೆ ಪಿಐ ಟಿ.ಎಸ್.ಸುಲ್ಫಿ ಹಾಗೂ ಎಸಿಪಿ ಡಾ. ಸಂಜೀವ ಪಾಟೀಲ ಅವರು ದೌರ್ಜನ್ಯ ನಡೆಸಿದ್ದಾರೆ. ನಮ್ಮ ಜಾಗೆಯಲ್ಲಿ ಮನೆ ಕಟ್ಟಿ ಗೃಹಪ್ರವೇಶ ಮಾಡಲೂ ಸಹ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ~ ಎಂದು ಆಪಾದಿಸಿದರು.ತಮ್ಮ ಸೊಸೈಟಿಯು ಮದಿಹಾಳ ವ್ಯಾಪ್ತಿಯಲ್ಲಿ ವಸಂತ ಕಾಳಪ್ಪ ಪತ್ತಾರ ಹಾಗೂ ರಮಜಾನಸಾಬ್ ನದಾಫ್ ಎಂಬುವರಿಗೆ 1974ರಲ್ಲಿ ನಿವೇಶನ ಖರೀದಿ ನೀಡಿದೆ. ಈ ನಿವೇಶನಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿದೆ. ಆದರೆ ಪಕ್ಕದಲ್ಲಿರುವ ತಮ್ಮ ನಿವೇಶನದ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ.ಈ ಕುರಿತು ನ್ಯಾಯಾಲಯದ ತೀರ್ಪು ತಮ್ಮ ಪರವಾಗಿಯೇ ಇದ್ದರೂ ಸಹ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.ಗೃಹ ಪ್ರವೇಶಕ್ಕೆ ಬಂದವರಲ್ಲಿ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಪೈಕಿ ಮೂವರನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ ಎಂದರು.ವಿವೇಕಾನಂದ ಪಾಲನಕರ, ಜಗದೀಶ ಪಾಲನಕರ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)