ಬಾಗಲಕೋಟೆ: ಜಿಲ್ಲಾ ಪೊಲೀಸ್ ಇಲಾಖೆಯಿಂದ ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟ ಭಾನುವಾರ ಆರಂಭಗೊಂಡಿತು.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಮನೋಜ್ ಜೈನ್, ಮನೆ, ಮಡದಿ, ಮಕ್ಕಳು, ಹಬ್ಬ, ಆಚರಣೆಗಳನ್ನು ಮರೆತು ವರ್ಷ ಪೂರ್ತಿ ಸಮಾಜಕ್ಕೆ ರಕ್ಷಣೆ ನೀಡುವ ಪೊಲೀಸರ ಸೇವೆ ಶ್ಲಾಘನೀಯ ಎಂದರು.

ಕೆಲಸದ ಒತ್ತಡದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬಳಲಿರುವ ಮನಸ್ಸಿಗೆ ಸಮಾದಾನ ನೀಡಲು ಹಾಗೂ ದೈಹಿಕವಾಗಿ ಮತ್ತಷ್ಟು ಬಲಿಷ್ಠರಾಗಲು ಪೊಲೀಸರಿಗೆ ಕ್ರೀಡೆ ಅತೀ ಮುಖ್ಯ ಎಂದರು.

ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಏಕ ತಂಡವಾಗಿ ಮುನ್ನೆಡೆಯುವುದು ಮುಖ್ಯ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಖುಷಿ ಪಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೂಲತಃ ಜಮಖಂಡಿ ತಾಲ್ಲೂಕಿನ ಹುಲ್ಯಾಳದವರಾದ ಚನ್ನಪ್ಪ ಶಿವಸಿಂಪಿ, ಬಾಗಲಕೋಟೆ ಡಿಎಸ್ಪಿ ವಿ.ಪಿ. ಜಗಲಿ, ಜಮಖಂಡಿ ಡಿಎಸ್ಪಿ ಜಿ.ಎಂ.ದೇಸೂರ್, ಡಿಸಿಆರ್ಬಿ ಡಿಎಸ್ಪಿ ಬಿ.ಪಿ.ಹಲಸಗುಂದ ಮತ್ತಿತರರು ಉಪಸ್ಥಿತರಿದ್ದರು.

ಬಾದಾಮಿ, ಹುನಗುಂದ, ಬಾಗಲಕೋಟೆ, ಜಮಖಂಡಿ, ಮುಧೋಳ, ಬನಹಟ್ಟಿ–ಬೀಳಗಿ, ಡಿಆರ್ ಹಾಗೂ ಮಹಿಳಾ ತಂಡ ಸೇರಿದಂತೆ ಒಟ್ಟು 8 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.