ಮಂಗಳವಾರ, ಏಪ್ರಿಲ್ 13, 2021
30 °C

ಪ್ರಚಾರದಲ್ಲಿ ಹೊಸ ಬಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಜನ ಮೆಟ್ರೊ ರೈಲು ಸಂಚಾರಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇದನ್ನೇ ತನ್ನ ಡಾಟಾ ಕಾರ್ಡ್ ಪ್ರಚಾರ ಆಂದೋಲನಕ್ಕೆ ಸರಕಾಗಿ ಬಳಸುತ್ತಿದೆ ಟಾಟಾ ಫೋಟಾನ್ ಪ್ಲಸ್. ಇದಕ್ಕಾಗಿ ಇಡಿ ಪ್ರಚಾರ ಫಲಕಕ್ಕೆ ಹೊಸ ಕಲ್ಪನೆ ತುಂಬಿದೆ.ಹೊಸೂರು ರಸ್ತೆ ಬಾಲ್ಡ್‌ವಿನ್ ಕಾಲೇಜು ಬಳಿಯ ಈ ಫಲಕವನ್ನು ನೀವು ನೋಡ ನೋಡುತ್ತಿದ್ದಂತೆ ಭಾರಿ ಗಾತ್ರದ ಬಿಲ್‌ಬೋರ್ಡ್ ಮೇಲೆ ಎಲ್‌ಇಡಿ ಲೈಟ್‌ನ ಬೆಳಕಿನಲ್ಲಿ ಮೆಟ್ರೊ ನಿಲ್ದಾಣ ತೆರೆದುಕೊಳ್ಳುತ್ತದೆ. ಮೆಟ್ರೊದಲ್ಲಿ ಪ್ರಯಾಣಿಸಿದರೆ ಬೇಗ ತಲುಪಬಹುದು. ಅದನ್ನು ಪೋಟಾನ್‌ಗೆ ಹೋಲಿಸುವುದು ಇದರ ಉದ್ದೇಶ. ಗೆಟ್ ಸ್ಪೀಡ್, ಗೆಟ್ ಟೈಂ ಎಂಬ ಧ್ಯೇಯದೊಂದಿಗೆ ಈ ಆಂದೋಲನ ನಡೆಯುತ್ತಿದೆ. ಗ್ರಾಹಕರು ಮೆಲ್, ಡೌನ್‌ಲೋಡ್ ಜೊತೆಗೆ ಬೃಹತ್ ಪ್ರಮಾಣ ಫೈಲ್ ಅಪ್‌ಲೋಡ್, ಪೋಟೊ ಶೇರ್ ಮೊದಲಾದ ಅವಕಾಶ ಪಡೆಯಲಿದ್ದಾರೆ ಎನ್ನುತ್ತದೆ  ಟಾಟಾ ಪ್ಲಸ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.