ಪ್ರಣವ್ ಗೆಲುವಿನಿಂದ ಯುಪಿಎ ಶಕ್ತಿ ಸಾಬೀತು: ಮೊಯಿಲಿ

ಗುರುವಾರ , ಜೂಲೈ 18, 2019
25 °C

ಪ್ರಣವ್ ಗೆಲುವಿನಿಂದ ಯುಪಿಎ ಶಕ್ತಿ ಸಾಬೀತು: ಮೊಯಿಲಿ

Published:
Updated:

ಯಲಹಂಕ: `ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಣವ್ ಮುಖರ್ಜಿ ಅವರು ಅತ್ಯಧಿಕ ಬಹುಮತದಿಂದ ಜಯ ಗಳಿಸಿರುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಶಕ್ತಿ ಏನೆಂಬುದನ್ನು ಸಾಬೀತಂತಾಗಿದೆ~ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.ದಾಸನಪುರ ಹೋಬಳಿಯ ಮಾಕಳಿ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ನಡೆದ  ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಇದಕ್ಕೂ ಮುನ್ನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, `ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಬಿಜೆಪಿ ಸರ್ಕಾರ ಗಮನಹರಿಸುತ್ತಿಲ್ಲ. ಸಚಿವರು ಪ್ರಬಲ ಖಾತೆಗಳಿಗೆ ಕ್ಯಾತೆ ತೆಗೆಯುವುದರಲ್ಲೇ ಕಾಲ ಕಳೆಯುತ್ತ್ದ್ದಿದು, ಕೇಂದ್ರದಿಂದ ಬಿಡುಗಡೆಯಾದ ಅನುದಾನ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಿಲ್ಲ~ ಎಂದರು.ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಅಂಜನಮೂರ್ತಿ, ನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಜಿ.ಪಂ. ಮಾಜಿ ಸದಸ್ಯ ಎಚ್.ಸೀನಪ್ಪ ಮಾತನಾಡಿದರು.ಮಾಜಿ ಶಾಸಕ ವಿ.ಕೃಷ್ಣಪ್ಪ. ಜಿ.ಪಂ. ಸದಸ್ಯ ವಿ.ಜಿ. ಜಯರಾಮಯ್ಯ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಭಾವ, ಸದಸ್ಯರಾದ ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷ ಚಾಂದ್‌ಪಾಷ, ಮಾಜಿ ಅಧ್ಯಕ್ಷ ಜಯಶಂಕರ್, ಮುಖಂಡರಾದ ಗೋಪಾಲಕೃಷ್ಣ, ಎಸ್.ಬಿ. ಬಾಷಾ, ಡಿ.ಎಂ.ಪ್ರಕಾಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry