ಪ್ರತಿಭಾವಂತ ವಿದ್ಯಾರ್ಥಿನಿ ಮಮತಾ
ಯಳಂದೂರು: ಪಟ್ಟಣದ ಬಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಿ. ಮಮತಾ ಪ್ರತಿಭಾವಂತೆ. `ಬಡತನ ಶಿಕ್ಷಣಕ್ಕೆ ಅಡ್ಡಿಯಲ್ಲ~ ಎಂಬುದಕ್ಕೆ ಅವಳ ಪ್ರತಿಭೆಯೇ ಸಾಕ್ಷಿ.
ವೃತ್ತಿಯಲ್ಲಿ ಟೈಲರ್ ಆಗಿರುವ ತಂದೆ ಬಂಗಾರನಾಯಕ ಹಾಗೂ ತಾಯಿ ವಿಜಯಲಕ್ಷ್ಮೀ ಅವರ ಮಗಳಾದ ಈಕೆ ತರಗತಿಯ ಪ್ರತಿಯೊಂದು ಚಟುವಟಿಕೆಯಲ್ಲೂ ಸದಾ ಮುಂದಿದ್ದಾಳೆ. ಈಕೆಯ ಪ್ರತಿಭೆಯನ್ನು ಶಿಕ್ಷಕರು ಕೂಡ ಪ್ರೋತ್ಸಾಹಿಸುತ್ತಿದ್ದಾರೆ. ಈ ಬಾರಿಯ ವಿಜ್ಞಾನ ಮಾದರಿ ವಸ್ತುಪ್ರದರ್ಶನಕ್ಕೆ ಈಕೆಯನ್ನು ಆಯ್ಕೆ ಮಾಡಿಕೊಂಡರು. ಅವರ ವಿಶ್ವಾಸಕ್ಕೆ ತಕ್ಕಂತೆ ಜಿಲ್ಲಾಮಟ್ಟದ ಇನ್ಸ್ಪೈರ್ ಅವಾರ್ಡ್ ಕೂಡ ತನ್ನದಾಗಿಸಿಕೊಂಡಿದ್ದಾಳೆ.
ಜತೆಗೆ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಲ್ಲೂಕಿನ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರಲ್ಲಿ ಈಕೆಯೂ ಒಬ್ಬಳು.
`ನನಗೆ ಓದುವುದೆಂದರೆ ತುಂಬಾ ಇಷ್ಟ. ಜತೆಗೆ, ಆಟೋಟಗಳಲ್ಲಿ ಭಾಗವಹಿಸುತ್ತೇನೆ. ವಿಜ್ಞಾನ ವಿಷಯ ಹಾಗೂ ಪರಿಕರಗಳಲ್ಲಿ ಆಸಕ್ತಿ ಹೆಚ್ಚು. ಇದಕ್ಕೆ ವಿಜ್ಞಾನ ಶಿಕ್ಷಕರಾದ ಅನ್ವರ್ಪಾಷಾ ಅವರ ಮಾರ್ಗದರ್ಶನದಲ್ಲಿ ನಾನು ತಯಾರಿಸಿದ `ಜಲಶಕ್ತಿಯಿಂದ ವಿದ್ಯುತ್ ತಯಾರಿಕೆ~ಯ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಪ್ರಶಸ್ತಿಗಳಿಸುವ ಗುರಿ ಹೊಂದಿದ್ದಾನೆ~ ಎನ್ನುತ್ತಾಳೆ ಮಮತಾ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.