ಗುರುವಾರ , ಮೇ 13, 2021
18 °C

ಪ್ರಧಾನಿ ಜೀವನಚರಿತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಐಎಎನ್‌ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನಚರಿತ್ರೆ ಬರೆಯಲು ಅವರ ಪುತ್ರಿ ದಮನ್ ಸಿಂಗ್ ಅವರು ಭರದ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.

`ಇದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಆದರೆ ನಾನು ನನ್ನ ಹೆತ್ತವರ ಬಗ್ಗೆ ಅವರ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳ ಬಳಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ~ ಎಂದು ದಮನ್  ಹೇಳಿದ್ದಾರೆ.ತಾವು ಬರೆಯಲಿರುವ ಜೀವನಚರಿತ್ರೆ ಲಘುವಾದ ಧಾಟಿಯಲ್ಲಿರುತ್ತದೆ. ಅದು ಕಚೇರಿಯ ಅಧಿಕೃತ ದಾಖಲೆಯಂತೆ ಇರಬೇಕೆಂದು ತಾವು ಬಯಸುವುದಿಲ್ಲ ಎಂದಿರುವ ದಮನ್, ತಂದೆಯ ಬಾಲ್ಯದ ಬಗೆಗಿನ ಮಾಹಿತಿಗಾಗಿ ಪಾಕಿಸ್ತಾನಕ್ಕೆ ಹೋಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.