ಹಾಸನ: ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎಸ್. ದಮಯಂತಿ ವರ್ತನೆ ವಿರುದ್ಧ ದೂರು ಗಳು ಬಂದ ಹಿನ್ನೆಲೆಯಲ್ಲಿ, ಕಾಲೇಜಿನ ಸಿಬ್ಬಂದಿ ಅವರ ವಿರುದ್ಧ ಪ್ರತಿಭಟನೆಗೆ ಮುಂದಾದ ಘಟನೆ ಗುರುವಾರ ನಡೆಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಗುರುವಾರ ಎಲ್ಲ ಸಿಬ್ಬಂದಿ ಪ್ರಾಂಶುಪಾಲರಾದ ದಮಯಂತಿ ಕೊಠಡಿಗೆ ತೆರಳಿ ಆಕ್ರೋಶ ವ್ಯಕ್ತ ಪಡಿಸಿದರು. ‘ಕಳೆದ ಹಲವು ದಿನಗಳಿಂದ ಹಿಂಸೆ ಸಹಿಸುತ್ತ ಬಂದಿದ್ದೇವೆ, ಇನ್ನು ಮುಂದೆ ಹಿಂಸೆ ನೀಡಿದರೆ ಕಾಲೇಜಿನ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ಆರಂಭಿಸುತ್ತೇವೆ’ ಎಂಬ ಎಚ್ಚರಿಕೆ ನೀಡಿದರು.

ಹಿನ್ನೆಲೆ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಕಾಲೇಜಿಗೆ ನಿಯೋಜನೆ (ಡೆಪ್ಯುಟೇಶನ್) ಮೇಲೆ ಬಂದಿದ್ದ ಸರೋಜಮ್ಮ ಹಾಗೂ ಶೋಭಾ ಜಗಬಾಳು ಎಂಬವರು ಒಂಬತ್ತು ತಿಂಗಳಿಂದ ರಜೆಹಾಕಿ ಹೋಗಿದ್ದಾರೆ.

ಎರಡು- ಮೂರು ತಿಂಗಳಿಗೊಮ್ಮೆ ಒಂದು ದಿನ ಬಂದು ಸಹಿಮಾಡಿ ಮತ್ತೆ ಹೊಸ ರಜೆ ಅರ್ಜಿ ಸಲ್ಲಿಸಿ ರಜೆ ಹೋಗುತ್ತಾರೆ. ಆದರೆ ಉಳಿದ ಸಿಬ್ಬಂದಿಗೆ ರಜೆ ಕೊಡುತ್ತಿಲ್ಲ. ಇಲ್ಲಿ ಡೆಪ್ಯುಟೇಶನ್ ಮೇಲೆ ಬಂದಿರುವ ಸಿಬ್ಬಂದಿಯ ಸಂಖ್ಯೆಯೇ ಹೆಚ್ಚಾಗಿದ್ದು, ಬೇರೆಯವರು ರಜೆ ಕೇಳಿದರೆ ಬಾಯಿಗೆ ಬಂದಂತೆ ಮಾತನಾಡಿ ಮಾನಸಿಕ ಹಿಂಸೆ ನೀಡುತ್ತಾರೆ. ಸರೋಜಮ್ಮ ಹಾಗೂ ಶೋಭಾ ಅವರಿಗೆ ಹೇಗೆ ರಜೆ ಕೊಟ್ಟಿದ್ದೀರಿ? ಎಂದು ಕೇಳಿದ್ದಕ್ಕೆ ಸಿಬ್ಬಂದಿಯನ್ನು ಬೈದಿದ್ದಾರೆ ಎಂದು ಕಾಲೇಜಿನ ಸಿಬ್ಬಂದಿ ಹಾಗೂ ಸಂಘದ ಅಧ್ಯಕ್ಷ ನಾಗರಾಜ್ ದೂರಿದರು.

‘ಪ್ರಾಂಶುಪಾಲರ ವಿರುದ್ಧ ಈಗಾಗಲೇ ವಿದ್ಯಾರ್ಥಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳನ್ನೇ ಎರಡು ಮೂರು ಗುಂಪುಗಳಾಗಿ ಪರಸ್ಪರರ ನಡುವೆ ಜಗಳವಾಗುವಂತೆ ಮಾಡಿದ್ದಾರೆ. ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ’ ಎಂದು ನಾಗರಾಜ್ ತಿಳಿಸಿದರು.

ಪ್ರಾಂಶುಪಾಲರ ಸ್ಪಷ್ಟನೆ: ಸಿಬ್ಬಂದಿಯ ಆರೋಪಗಳನ್ನು ದಮಯಂತಿ ತಳ್ಳಿಹಾಕಿದ್ದಾರೆ. ‘ನಾನು ಯಾವ ಸಿಬ್ಬಂದಿ ಜತೆಗೂ ಅನುಚಿತವಾಗಿ ವರ್ತಿಸಿಲ್ಲ. ಯಾರನ್ನೂ ಬೈದಿಲ್ಲ. ಸರೋಜಮ್ಮ ಹಾಗೂ ಶೋಭಾ ಎಂಟು ತಿಂಗಳಿಂದ ರಜೆಯಲ್ಲಿರುವುದು ನಿಜ. ಆದರೆ ಅವರು ಡೆಪ್ಯುಟೇಶನ್ ಮೇಲೆ ಬಂದಿರುವುದರಿಂದ ಅವರಿಗೆ ರಜೆ ಮಂಜೂರು ಮಾಡುವ ಅಥವಾ ನಿರಾಕರಿಸುವ ಅಧಿಕಾರ ನನ್ನ ಕೈಯಲ್ಲಿಲ್ಲ. ರಜೆಯ ಅರ್ಜಿ ನೀಡಿದರೆ ಅದನ್ನು ಅವರ ಮೂಲ ಸಂಸ್ಥೆಗೆ ಕಳುಹಿಸುವುದಷ್ಟೇ ನಮ್ಮ ಕರ್ತವ್ಯ’ ಎಂದರು.

‘ಈ ಇಬ್ಬರು ನಾಲ್ಕು ತಿಂಗಳ ಹಿಂದೆ ನೀಡಿದ್ದ ಅರ್ಜಿಯನ್ನು ನಮ್ಮ ಸಿಬ್ಬಂದಿ ತಮ್ಮಲ್ಲೇ ಇಟ್ಟುಕೊಂಡಿದ್ದರು. ಯಾಕೆ ಬೆಂಗಳೂರಿಗೆ ಕಳುಹಿಸಿಲ್ಲ ಎಂದು ಕೇಳಿದ್ದಕ್ಕೆ ಇಷ್ಟೆಲ್ಲ ಆರೋಪ ಮಾಡುತ್ತಿದ್ದಾರೆ. ಸಂಸ್ಥೆಯ ಮುಖ್ಯಸ್ಥೆಯಾಗಿ ಇಷ್ಟನ್ನು ಕೇಳಿದ್ದೂ ತಪ್ಪೇ?’ ಎಂದು ಪ್ರಶ್ನಿಸಿದರು.

‘ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ಮುಷ್ಕರ ನಡೆಯುತ್ತಿರುವುದರಿಂದ ಇಲ್ಲಿಂದ ಆರು ಮಂದಿಯನ್ನು ಅಲ್ಲಿಗೆ ಕಳುಹಿಸಲಾಗಿದೆ. ಇನ್ನೂ ಕೆಲವರು ಹೋಗಬೇಕಾಗಿತ್ತು. ಇಲ್ಲಿ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡು ಉಳಿಸಿದ್ದೇನೆ’ ಎಂದರು.

‘ಈ ವಿಚಾರ ಯಾರೂ ಎತ್ತುತ್ತಿಲ್ಲ. ಸಣ್ಣ ಪುಟ್ಟ ಕಾರಣಕ್ಕೂ ಸಿಬ್ಬಂದಿಗೆ ‘ಮೆಮೊ’ ನೀಡಬಾರದೆಂಬ ಉದ್ದೇಶದಿಂದ ಮೌಖಿಕವಾಗಿ ಆದೇಶ ನೀಡುತ್ತೇನೆ. ಅದನ್ನೇ ’ಹಿಂಸೆ’ ಎಂದು ಬಿಂಬಿಸಲಾಗುತ್ತಿದೆ’ ಎಂದು ಅವರು ನುಡಿದರು.

ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಲವಿದ್ಯಾರ್ಥಿಗಳೂ ಪ್ರಾಂಶುಪಾಲರ ವಿರುದ್ಧ ದೂರುಗಳನ್ನು ನೀಡಲು ಮುಂದಾದರು. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.