ಗುರುವಾರ , ಮೇ 19, 2022
22 °C

ಪ್ರಾಣಿಗಳ ಸಾವಿಗೆ ಬೇರೆ ಅರ್ಥ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಬನ್ನೇರುಘಟ್ಟ ವನ್ಯಜೀವಿ ಧಾಮದಲ್ಲಿ ಕಳೆದ ಒಂದು ವರ್ಷದಿಂದ (2010ರ ಜನವರಿ ಇಲ್ಲಿಯವರೆಗೆ) ವಿವಿಧ ರೋಗ ಮತ್ತು ವಯಸ್ಸಾದ ಕಾರಣಕ್ಕೆ ಒಟ್ಟು 9 ಹುಲಿ ಮತ್ತು 11 ಸಿಂಹಗಳು ಸತ್ತಿದ್ದು, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಬುಧವಾರ ವಿಧಾನಸಭೆಗೆ ತಿಳಿಸಿದರು.ಬನ್ನೇರುಘಟ್ಟದಲ್ಲಿನ ವನ್ಯ ಪ್ರಾಣಿಗಳಿಗೆ ಸರಿಯಾದ ಆಹಾರ ನೀಡದ ಕಾರಣಕ್ಕೆ ಅವು ಸಾಯುತ್ತಿವೆ ಎಂದು ಕಾಂಗ್ರೆಸ್‌ನ ಎನ್.ಸಂಪಂಗಿ ಅವರು ಸರ್ಕಾರದ ಗಮನ ಸೆಳೆದರು.ಒಂಬತ್ತು ಹುಲಿಗಳ ಪೈಕಿ ಮೂರು ಹುಲಿಗಳನ್ನು ಸರ್ಕಸ್ ಕಂಪೆನಿಯಿಂದ ಕರೆತರಲಾಗಿತ್ತು. ಎರಡು ಹುಲಿಗಳು ವಯಸ್ಸಾದ ಕಾರಣಕ್ಕೆ ಸತ್ತಿದ್ದವು. ಮತ್ತೊಂದು ಹುಲಿ ಸೈಯನಡ್ ಸೇವನೆಯಿಂದ ಸತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದರು.ಉಳಿದ ಹುಲಿಗಳು ಸೋಂಕು ರೋಗದಿಂದ ಸತ್ತಿವೆ. ರೋಗದ ಜತೆಗೆ ಎಲ್ಲ ಹುಲಿಗಳಿಗೂ ವಯಸ್ಸಾಗಿತ್ತು. ಹೀಗಾಗಿ ಸಹಜವಾಗಿಯೇ ಸತ್ತಿವೆ. ಇವು ಯಾರ ನಿರ್ಲಕ್ಷ್ಯದಿಂದ ಸತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಸತ್ತ ಎಲ್ಲ 11 ಸಿಂಹಗಳಿಗೂ ವಯಸ್ಸಾಗಿತ್ತು. ಇವುಗಳನ್ನು ಭಾರತೀಯ ಸರ್ಕಸ್ ಕಂಪೆನಿಗಳಿಂದ ರಕ್ಷಿಸಿ, ಬನ್ನೇರುಘಟ್ಟದ ವನ್ಯಜೀವಿ ಧಾಮದಲ್ಲಿ ಉಳಿಸಲಾಗಿತ್ತು ಎಂದು ಅವರು ವಿವರಿಸಿದರು.ಸಚಿವರ ಈ ಉತ್ತರದಿಂದ ಸಂಪಂಗಿ ಸೇರಿದಂತೆ ಇತರ ಸದಸ್ಯರು ತೃಪ್ತರಾಗಲಿಲ್ಲ. ಹುಲಿಗೆ ಸಯನೈಡ್ ಹಾಕಿದ್ದು ಯಾರು? ಅವರಿಗೆ ಸಯನೈಡ್ ಎಲ್ಲಿಂದ ಸಿಕ್ಕಿತು ಎಂದು ಸಂಪಂಗಿ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.