ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಕಾಲ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದ್ದರೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ರೀತಿಯ ಫಲಾಪೇಕ್ಷೆ ಮಾಡದೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಸತೀಶ್ಕುಮಾರ್ ತಿಳಿಸಿದರು.

ನಗರದಲ್ಲಿ ಈಚೆಗೆ `ಸಕಾಲ~ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಸಾರ್ವಜನಿಕರಿಗೆ ಸಕಾಲ ಅತ್ಯುಪಯುಕ್ತ ಕಾಯ್ದೆಯಾಗಿದ್ದು, ಅದರ ಸದ್ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು~ ಎಂದರು.

`ಸಕಾಲ ಕಾಯ್ದೆ ಬಗ್ಗೆ ಜನರಿಗೆ ಗೊತ್ತಿದೆಯಾದರೂ ಸಂಪೂರ್ಣವಾದ ಸಮಗ್ರ ಮಾಹಿತಿ ಹೊಂದಿಲ್ಲ. ಇದರ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. ಬೀದಿ ನಾಟಕ, ಗೀತೆ ಸೇರಿದಂತೆ ಇತರ ಸಂವಹನ ಮಾಧ್ಯಮಗಳ ಮೂಲಕ ಅವರಲ್ಲಿ ಅರಿವು ಮೂಡಿಸಬೇಕು~ ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ತಹಶೀಲ್ದಾರ್ ಭಾಸ್ಕರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಮಚಂದ್ರ ರೆಡ್ಡಿ, ಸದಸ್ಯ ಕೃಷ್ಣಮೂರ್ತಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎನ್.ಕವನಾ ಉಪಸ್ಥಿತರಿದ್ದರು.

ಎಲ್ಲೆಲ್ಲಿ ನಾಟಕ ಪ್ರದರ್ಶನ?
ಚಿಕ್ಕಬಳ್ಳಾಪುರ: ಸಕಾಲ ಕಾಯ್ದೆ ಕುರಿತು ಗೌರಿಬಿದನೂರಿನ ಪ್ರಜ್ಞಾ ಕಲಾ ತಂಡದ ಕಲಾವಿದರು ಜಿಲ್ಲೆಯಾದ್ಯಂತ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಿದ್ದು, ಆಗಸ್ಟ್ 23 ರವರೆಗೆ ಪ್ರದರ್ಶನ ನಡೆಯಲಿದೆ. ಆಯಾ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ನಾಟಕ ವೀಕ್ಷಿಸಬಹುದು.

ಜು.7ರಿಂದ11: ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ, ದಿಬ್ಬೂರು, ದೊಡ್ಡಪಾಯಲಗುರ್ಕಿ, ಗೊಲ್ಲಹಳ್ಳಿ, ಹೊಸಹುಡ್ಯ, ಮಂಚನಬಲೆ, ನಂದಿ, ಪಟ್ರೇನಹಳ್ಳಿ ಮತ್ತು ಪೆರೇಸಂದ್ರ.

ಜು.16ರಿಂದ20: ಚಿಂತಾಮಣಿ ತಾಲ್ಲೂಕಿನ ಉಪ್ಪಾರಪೇಟೆ, ಏನಿಗದೆಲೆ, ಕುರುಬೂರು, ಕೈವಾರ, ಚನ್ನಸಂದ್ರ ಮತ್ತು ಮುರುಗಮಲೆ.

ಜು.27ರಿಂದ31: ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ, ಬಿಳ್ಳೂರು, ಘಟಂವಾರುಪಲ್ಲಿ, ಪರಗೋಡು, ಎಲ್ಲಂಪಲ್ಲಿ, ಚೇಳೂರು, ಗೂಳೂರು ಮತ್ತು ಮಿಟ್ಟೇಮರಿ.

ಆ.5ರಿಂದ9: ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು, ಬಶೆಟ್ಟಿಹಳ್ಳಿ, ದಿಬ್ಬೂರುಹಳ್ಳಿ, ಗಂಜಿಗುಂಟೆ, ಹಂಡಿಗನಾಳ, ತಿಮ್ಮಸಂದ್ರ, ಜಂಗಮಕೋಟೆ, ಸಾದಲಿ ಮತ್ತು ವೈ.ಹುಣಸೇನಹಳ್ಳಿ.

ಆ.10ರಿಂದ15: ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ, ವರ್ಲಕೊಂಡ, ಸೋಮೇನಹಳ್ಳಿ ಮತ್ತು ಯಲ್ಲೋಡು.

ಆಗಸ್ಟ್ 19 ರಿಂದ 23: ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ, ಗಂಗಸಂದ್ರ, ನಗರಗೆರೆ, ಮಂಚೇನಹಳ್ಳಿ, ಡಿ.ಪಾಳ್ಯ, ರಮಾಪುರ, ಹುದುಗೂರು ಮತ್ತು ಹಿರೇಬಿದನೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.