ಬೆಂಗಳೂರು: ಮೈಸೂರು ರಸ್ತೆ ಸಮೀಪದ ಬಾಪೂಜಿನಗರದಲ್ಲಿ ಯುವಕನೊಬ್ಬ ತನ್ನ ಪಕ್ಕದ ಮನೆಯ ಯುವತಿಯ ಮುಖವನ್ನು ಬ್ಲೇಡ್ನಿಂದ ಕೊಯ್ದು ಹಲ್ಲೆ ನಡೆಸಿರುವ ಶುಕ್ರವಾರ ನಡೆದಿದೆ.

ಬಾಪೂಜಿನಗರ ಏಳನೇ ಅಡ್ಡರಸ್ತೆ ನಿವಾಸಿ ಗಣೇಶ್ (25) ಎಂಬಾತ ಈ ಕೃತ್ಯ ಎಸಗಿದ್ದು, ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಖಾಸಗಿ ಕಂಪೆನಿ ಉದ್ಯೋಗಿಯಾದ ಗಣೇಶ್, ತನ್ನ ಪಕ್ಕದ ಮನೆಯಲ್ಲಿ ವಾಸವಿರುವ ರೂಪಾ ಎಂಬ ಯುವತಿಯನ್ನು ಸುಮಾರ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದ. ಆದರೆ, ಯುವತಿ ಆತನನ್ನು ಪ್ರೀತಿ ಮಾಡಲು ನಿರಾಕರಿಸಿದ್ದರು. ಈ ನಡುವೆ ರೂಪಾ ಕುಟುಂಬ ಸದಸ್ಯರು ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕೋಪಗೊಂಡಿದ್ದ ಗಣೇಶ್, ರಾತ್ರಿ ಮನೆಯ ಮುಂದೆ ನಿಂತಿದ್ದ ರೂಪಾ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ, ಅವರ ಕೈ, ಕುತ್ತಿಗೆ ಮತ್ತು ಮುಖವನ್ನು ಬ್ಲೇಡ್ನಿಂದ ಕೊಯ್ದಿದ್ದಾನೆ. ಈ ವೇಳೆ ರೂಪಾ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸ್ಥಳೀಯರು ಗಣೇಶ್ನನ್ನು ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರೂಪಾ ಮತ್ತು ಆರೋಪಿ ಗಣೇಶ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಗುಣಮುಖನಾದ ನಂತರ ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.