ಫಾರ್ಮುಲಾ-1 ರೇಸ್ ಟ್ರ್ಯಾಕ್‌ಗೆ ಚಾಲನೆ

7

ಫಾರ್ಮುಲಾ-1 ರೇಸ್ ಟ್ರ್ಯಾಕ್‌ಗೆ ಚಾಲನೆ

Published:
Updated:

ನವದೆಹಲಿ (ಪಿಟಿಐ): ಭಾರತದಲ್ಲಿ ನಡೆಯಲಿರುವ ಚೊಚ್ಚಲ ಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ರೇಸ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಮಂಗಳವಾರ `ಬುದ್ಧ ಅಂತರರಾಷ್ಟ್ರೀಯ ರೇಸ್ ಸರ್ಕಿಟ್~ಗೆ ಚಾಲನೆ ನೀಡಲಾಯಿತು.



`ಇದು ವಿಶ್ವದ ಅತ್ಯುತ್ತಮ ಟ್ರ್ಯಾಕ್‌ಗಳಲ್ಲಿ ಒಂದು~ ಎಂದು ಭಾರತದ ಮೊದಲ ಫಾರ್ಮುಲಾ ಒನ್ ಡ್ರೈವರ್ ನಾರಾಯಣ್ ಕಾರ್ತಿಕೇಯನ್ ನುಡಿದರು.



`ನಾನು ವಿಶ್ವದ ಹೆಚ್ಚಿನ ಟ್ರ್ಯಾಕ್‌ಗಳಲ್ಲಿ ನಡೆದ ರೇಸ್‌ನಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇದೊಂದು ವಿಶ್ವದಲ್ಲೇ ಅತ್ಯುತ್ತಮ ಟ್ರ್ಯಾಕ್~ ಎಂದು ಹಿಸ್ಪಾನಿಯಾ ರೇಸಿಂಗ್ ತಂಡದ ಕಾರ್ತಿಕೇಯನ್ ಹೇಳಿದರು. ಅಕ್ಟೋಬರ್ 28ರಿಂದ 30ರವರೆಗೆ ಇಲ್ಲಿ ರೇಸ್ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry