ಫುಟ್ಬಾಲ್: ಎಡಿಇಗೆ ಪ್ರಶಸ್ತಿ
ಬೆಂಗಳೂರು: ಪ್ರಭಾವಿ ಪ್ರದರ್ಶನ ನೀಡಿದ ರವಿ ಕೃಷ್ಣ ಉನ್ನಿ ಅವರ ನೆರವಿನಿಂದ ಎಡಿಇ ತಂಡದವರು ಇಲ್ಲಿ ನಡೆದ ಡಿಆರ್ಡಿಒ ದಕ್ಷಿಣ ವಲಯ ಫುಟ್ಬಾಲ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಎಡಿಇ 1-0ಗೋಲುಗಳಿಂದ ಎಲ್ಆರ್ಡಿಎ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರವಿ ಕೃಷ್ಣ ಎಡಿಇ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಆಟಗಾರ 32ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು. ನಂತರ ಎದುರಾಳಿ ತಂಡ ಯಾವುದೇ ಗೋಲು ಗಳಿಸಲು ಅವಕಾಶ ನೀಡಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.