ಮಂಗಳವಾರ, ಜನವರಿ 28, 2020
17 °C

ಫುಟ್‌ಬಾಲ್: ಜುಪಿಟರ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜುಪಿಟರ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಜುಪಿಟರ್ ತಂಡ 2-0 ಗೋಲುಗಳಿಂದ ಸನ್ ರೈಸಿಂಗ್ ವಿರುದ್ಧ ಜಯ ಪಡೆಯಿತು. ಅಮರನ್ (2ನೇ ನಿಮಿಷ) ಮತ್ತು ಹರೀಶ್ (40) ಜುಪಿಟರ್ ಪರ ಗೋಲು ಗಳಿಸಿದರು.ಜವಾಹರ್ ಯೂನಿಯನ್ 6-0 ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ತಂಡವನ್ನು ಮಣಿಸಿತು. ವಿಜೇತ ತಂಡದ ರಾಬಿನ್ (13, 24 ಮತ್ತು 43) ಮೂರು ಗೋಲುಗಳನ್ನು ಗಳಿಸಿದರೆ, ಹರ್ದಯ್ (31), ವೇಯ್ನ (52) ಹಾಗೂ ನಿರವ್ (63) ಇತರ ಗೋಲುಗಳನ್ನು ತಂದಿತ್ತರು.ದಿನದ ಇತರ ಪಂದ್ಯಗಳಲ್ಲಿ ನ್ಯಾಷನಲ್ಸ್ 3-1 ರಲ್ಲಿ ಗೋವನ್ಸ್ ವಿರುದ್ಧವೂ, ರಾಯಲ್ಸ್ 3-2 ರಲ್ಲಿ ಶ್ರೀ ಗಜಾನನ ಮೇಲೂ ಗೆಲುವು ಪಡೆದವು.

 

ಪ್ರತಿಕ್ರಿಯಿಸಿ (+)