ಫುಟ್ಬಾಲ್: ಬಿನ್ನಿ ಕ್ಲಬ್ಗೆ ಜಯ
ಬೆಂಗಳೂರು: ಬಿನ್ನಿ ಫುಟ್ಬಾಲ್ ಕ್ಲಬ್ ಇಲ್ಲಿ ನಡೆಯುತ್ತಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದ ರಾಜ್ಯ `ಸಿ~ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಬುಧವಾರದ ಪಂದ್ಯದಲ್ಲಿ 4-1 ಗೋಲುಗಳಿಂದ ಸರ್ವಜ್ಞ ನಗರ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ರೋಹಿತ್ 22ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು.
ಉಳಿದ ಗೋಲುಗಳನ್ನು ಮಾರ್ಟಿನ್ (22ನೇ ನಿಮಿಷ), ಸಿಜು (40ನೇ ನಿ.) ಮತ್ತು ದೀಪಕ್ (46ನೇ ನಿ.) ಗಳಿಸಿದರು. ಸರ್ವಜ್ಞ ತಂಡದ ಏಕೈಕ ಗೋಲನ್ನು ನರೇಂದ್ರ 29ನೇ ನಿಮಿಷದಲ್ಲಿ ಕಲೆ ಹಾಕಿದರು.
ಇನ್ನೊಂದು ಪಂದ್ಯದಲ್ಲಿ ವೆಟರನ್ಸ್ ತಂಡ 1-0ಗೋಲುನಿಂದ ಕ್ವೀನ್ಸ್ ಸ್ಟಾರ್ ತಂಡವನ್ನು ಸೋಲಿಸಿತು.
ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ ಒಡ್ಡಿದರೂ, ಹಿರೋಸ್ ಕ್ಲಬ್ ತಂಡ 3-2ಗೋಲುಗಳಿಂದ ವಿಜಯನಗರ ಎದುರಿನ ಪಂದ್ಯದಲ್ಲಿ ಸೋಲು ಕಂಡಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.