ಭಾನುವಾರ, ಜನವರಿ 26, 2020
24 °C

ಫ್ರಾನ್ಸ್‌: ಕೃತಕ ಹೃದಯ ಕಸಿ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಇದೇ ಮೊದಲ ಬಾರಿ 75 ವರ್ಷದ ರೋಗಿಯೊಬ್ಬರಿಗೆ ಕೃತಕ ಹೃದಯ ಕಸಿ ಕಟ್ಟುವಲ್ಲಿ ಫ್ರಾನ್ಸ್‌ ವೈದ್ಯರು ಯಶಸ್ವಿಯಾಗಿದ್ದಾರೆ.

ಒಂದು ಕೆ.ಜಿಗಿಂತಲೂ ಕಡಿಮೆ (ಆರೋ­ಗ್ಯ­ವಂತ ಮಾನವನ ಹೃದ­ಯದ ಮೂರು  ಪಟ್ಟು) ತೂಕ ಹೊಂದಿ­ರುವ ಈ ಕೃತಕ ಹೃದಯವು ರೋಗಿಯ ಆಯಸ್ಸನ್ನು ಐದು ವರ್ಷ ಹೆಚ್ಚಿಸಬಲ್ಲದು.ಲೀಥಿಯಂ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುವ  ಈ ಹೃದಯ­ವನ್ನು ಫ್ರಾನ್ಸ್‌ನ ಜೀವವೈದ್ಯಕೀಯ ಕಂಪೆನಿ ‘ಕಾರ್ಮಟ್‌’ ಅಭಿವೃದ್ಧಿ ಪಡಿಸಿದೆ. ರೋಗಿಗಳು ಈ ಹೃದಯ­ವನ್ನು ದೇಹದ ಹೊರಭಾಗದಲ್ಲಿ ಧರಿಸ­ಬಹುದಾಗಿದೆ.ಪ್ಯಾರಿಸ್‌ನ  ಜಾರ್ಜ್‌  ಪೊಂಪಿ­ಡುವೊ ಆಸ್ಪತ್ರೆಯಲ್ಲಿ ಕೃತಕ ಹೃದಯ­ವನ್ನು ವೃದ್ಧ ರೋಗಿಯೊಬ್ಬರಿಗೆ ಯಶ­ಸ್ವಿ­ಯಾಗಿ ಕಸಿ ಮಾಡಲಾಗಿದೆ. ಈ ಕಸಿ ಕಟ್ಟುವಿಕೆಯಲ್ಲಿ ಹಸು­ಗಳ ಅಂಗಾಂಶ ಸೇರಿ­ದಂತೆ ಹಲವು ‘ಜೈವಿಕ–ಸಾಮಗ್ರಿ’ ಬಳಸಲಾಗುತ್ತದೆ ಎಂದು ‘ದ ಟೆಲಿಗ್ರಾಫ್‌’ ವರದಿ  ಮಾಡಿದೆ.ಇದುವರೆಗೆ ಲಭ್ಯವಿದ್ದ ಕೃತಕ ಹೃದಯಗಳನ್ನು ಕೇವಲ ತಾತ್ಕಾಲಿಕ ಅವ­ಧಿ­ಗಷ್ಟೇ ಬಳಸಲಾಗುತ್ತಿತ್ತು. ಆದರೆ,  ಹೊಸ ಹೃದಯವು ಐದು ವರ್ಷ­ಗಳ ಕಾಲ ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸಬಹುದು.ಕೃತಕ ಹೃದಯ ಅಳವಡಿಸಲಾಗಿ­ರುವ  ರೋಗಿಯ ಆರೋಗ್ಯ ಸ್ಥಿರವಾ­ಗಿದ್ದು, ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸು­ತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)