ಬಂಜಾರ (ಲಂಬಾಣಿ )ಜನಾಂಗ ತಮ್ಮ ವಿಶಿಷ್ಟ ಕಲೆಯಿಂದ ವಿಶ್ವಖ್ಯಾತಿ ಪಡೆದಿದೆ. ಲಂಬಾಣಿ ಮಹಿಳೆಯರು ಬಟ್ಟೆಗಳ ಮೇಲೆ ಗಾಜು, ಕವಡೆ, ಬಣ್ಣದ ದಾರಗಳನ್ನು ಬಳಸಿ ಮಾಡುವ ಕಸೂತಿ ಕಲೆಗೆ ಈಗ ಉದ್ಯಮದ ರೂಪ ನೀಡಲಾಗಿದೆ.

ಬಳ್ಳಾರಿಯ ಸಂಡೂರಿನಲ್ಲಿ `ಸಂಡೂರು ಕುಶಲ ಕಲಾಕೇಂದ್ರ' ಸ್ಥಾಪಿಸಿ ಲಂಬಾಣಿ ಕುಸುರಿ ಕಲೆಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಮಾಡಲಾಗಿದೆ. ಕೇಂದ್ರವು ಖಾದಿ ಮತ್ತು ಗ್ರಾಮೋದ್ಯೋಗ ಕಮಿಷನ್ ಮಾನ್ಯತೆ ಪಡೆದಿದೆ. ಕೇಂದ್ರದ ಅಡಿಯಲ್ಲಿ ತಯಾರಾದ ವಸ್ತುಗಳ ಪ್ರದರ್ಶನ ಎಂ.ಜಿ. ರಸ್ತೆಯ ಕಾವೇರಿ ಎಂಪೋರಿಯಂನಲ್ಲಿ ಆರಂಭಗೊಂಡಿದೆ.

ಲಂಬಾಣಿ ಕುಸುರಿಯ ಕುರ್ತಾ, ಚೀಲ, ಟೇಬಲ್ ಸೋಫಾ ಕವರ್, ಕುಶನ್ ಕವರ್, ವಾಲ್ ಕ್ಲೋತ್, ಕ್ಯಾಪ್, ಮೊಬೈಲ್ ಕವರ್ಗಳ ಬೃಹತ್ ಸಂಗ್ರಹ ಪ್ರದರ್ಶನದಲ್ಲಿದೆ. ವಿವಿಧ ಬಣ್ಣ ಮತ್ತು ವಿನ್ಯಾಸ ಗಾತ್ರದ ಮಹಿಳೆಯರ ಬ್ಯಾಗುಗಳು ಆಕರ್ಷಕವಾಗಿದೆ. ಈ ಪ್ರದರ್ಶನ ಇನ್ನೂ ಒಂದು ತಿಂಗಳು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.