ಶಿವಮೊಗ್ಗ: ಸಂತೆಕಡೂರು ಪರಿಸರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಪರಿಸರ ಅಧ್ಯಯನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಬಂದ್ಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಸಿರು ಶಾಲೆ ವಿಭಾಗದಲ್ಲಿ ಮಾರುತಿಪುರದ ನಿರೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಸಮಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ದ್ವಿತೀಯ), ಸೊರಬ ತಾಲ್ಲೂಕಿನ ಶಿಗ್ಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ತೃತೀಯ), ಹೊಸನಗರ ತಾಲ್ಲೂಕಿನ ಸಿಡಿಯಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ನಾಲ್ಕನೇ ಸ್ಥಾನ), ನಗರದ ದುಬಾರತಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಐದನೇ ಸ್ಥಾನ),

ಹೊಸನಗರ ತಾಲ್ಲೂಕಿನ ಸೊನಲೆ ಸರ್ಕಾರಿ ಪ್ರೌಢಶಾಲೆ (ಆರನೇ ಸ್ಥಾನ), ಭದ್ರಾವತಿ ತಾಲ್ಲೂಕಿನ ಅರಕೇರೆಯ ಸರ್ಕಾರಿ ಪ್ರೌಢಶಾಲೆ (ಏಳನೇ ಸ್ಥಾನ), ಸೊರಬ ತಾಲ್ಲೂಕಿನ ಮಾವಲಿಯ ಉಮಾ ಮಹೇಶ್ವರ ಗ್ರಾಮಂತರ ಪ್ರೌಢಶಾಲೆ (ಎಂಟನೇ ಸ್ಥಾನ), ಸಾಗರ ತಾಲ್ಲೂಕಿನ ಸೈದೂರು ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆ (9ನೇ ಸ್ಥಾನ),ಶಿಕಾರಿಪುರ ತಾಲ್ಲೂಕಿನ ಹಿರೇಕಲವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (10ನೇ ಸ್ಥಾನ).

ಹಳದಿ ಶಾಲೆ ವಿಭಾಗದಲ್ಲಿ ಹೊಸನಗರ ತಾಲ್ಲೂಕಿನ ಹಡ್ಲುಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಸೊರಬ ತಾಲ್ಲೂಕಿ ನ ಹೊಳೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ದ್ವಿತೀಯ), ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿಯ ಅಲಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ತೃತೀಯ), ಹೊಸನಗರ ತಾಲ್ಲೂಕಿನ ಚಕ್ರಾನಗರದ ನ್ಯೂಮಳಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (4ನೇ ಸ್ಥಾನ), ಹೊಸನಗರದ ಸಿದ್ದಗಿರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (5ನೇ ಸ್ಥಾನ), ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (6ನೇ ಸ್ಥಾನ), ಹೊಸನಗರ ತಾಲ್ಲೂಕಿನ ನೂಲಿಗ್ಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (7ನೇ ಸ್ಥಾನ), ಸಾಗರ ತಾಲ್ಲೂಕಿನ ಆಚಾಪುರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (8ನೇ ಸ್ಥಾನ),

ಹೊಸನಗರ ತಾಲ್ಲೂಕಿನ ಹೂವಿನಕೋಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (9ನೇ ಸ್ಥಾನ), ಸಾಗರ ತಾಲ್ಲೂಕಿನ ಯಡೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (10ನೇ ಸ್ಥಾನ) ಪಡೆದುಕೊಂಡಿವೆ.

ನಂತರ ಡಿ.ಎಸ್.ಟಿ.ಆರ್.ಟಿ. ಜಂಟಿ ನಿರ್ದೇಶಕಿ ಜಿ.ಪಿ.ಚಂದ್ರಮ್ಮ ಮಾತನಾಡಿ, ಮಕ್ಕಳಲ್ಲಿ ಭವಿಷ್ಯದ ಕುರಿತು ಭರವಸೆ ಮೂಡಿಸುವಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ ಸಹಕಾರಿ ಎಂದು ಅಭಿ-ಪ್ರಾಯಪಟ್ಟರು.

ನಂತರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯ್ ಕುಮಾರ್ ‘ಹಸಿರ ಕನಸು ನನಸು’ ಪುಸ್ತಕ ಬಿಡುಗಡೆ ಮಾಡಿದರು. ಅಪ್ಪಿಕೋ ಚಳುವಳಿಯ ಪಾಂಡುರಂಗ ಹೆಗಡೆ ಮಾತನಾಡಿದರು. ಪ್ರೊ.ಎ.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಟಿ.ಎಸ್.ಹೂವಯ್ಯಗೌಡ, ಅಣ್ಣಪ್ಪ ಮತ್ತು ಪ್ರೊ.ಬಿ.ಬಿ.ಹೊಸೆಟ್ಟಿ, ಜಿ.ಎಲ್. ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು.

ಗುರುಮೂರ್ತಿ ಸ್ವಾಗತಿಸಿದರು. ಸಿ.ಎಸ್. ಚಂದ್ರಶೇಖರ್ ವಂದಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

ಪರಿಸರ ಮಿತ್ರ ಶಾಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿದ ಶಾಲೆಗಳಿಂದ ಒಟ್ಟು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.