ಬುಧವಾರ, ಮೇ 18, 2022
23 °C

ಬಡ್ತಿ ಕಡಿತ ಬೇಡ: ಸರ್ಕಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗಾಗಲೇ ನೀಡಿರುವ ಆರು ಕಾಲ್ಪನಿಕ ವಾರ್ಷಿಕ ಬಡ್ತಿಗಳನ್ನು ಕಡಿತ ಮಾಡುವುದು ಸರಿಯಲ್ಲ. ಕೂಡಲೇ ಈ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಕಾಯಂಗೊಂಡ ಗುತ್ತಿಗೆ ಶಿಕ್ಷಕರ ಮತ್ತು ಉಪನ್ಯಾಸಕರ ಜಂಟಿ ಕ್ರಿಯಾ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.ಶಾಲಾ-ಕಾಲೇಜುಗಳಲ್ಲಿ ಕಾಯಂಗೊಂಡ ಶಿಕ್ಷಕರು, ಉಪನ್ಯಾಸಕರು 1984ರಿಂದ 1991ರವರೆಗೆ ಕಾನೂನು ಬದ್ಧವಾಗಿ ಪಡೆದಿರುವ ಆರು ಕಾಲ್ಪನಿಕ ವಾರ್ಷಿಕ ಬಡ್ತಿಗಳನ್ನು ಹಿಂಪಡೆಯಲು ಹೊರಟಿರುವುದು ಖಂಡನಾರ್ಹ ಎಂದು ಸಮಿತಿಯ ಅಧ್ಯಕ್ಷ ಎಸ್.ಎಸ್.ಸುರೇಶ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.ಶಿಕ್ಷಕರು, ಉಪನ್ಯಾಸಕರಿಗೆ ನೀಡಿದ್ದ ಬಡ್ತಿಗಳನ್ನು ಕಡಿತ ಮಾಡುವ ನಿರ್ಧಾರ ಅವೈಜ್ಞಾನಿಕ. ಯಾವುದೇ ಕಾರಣಕ್ಕೂ ಇದನ್ನು ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.