ಬೆಂಗಳೂರು: ಕೆ.ಎ.ಎಸ್. ಯೇತರ ಅಧಿಕಾರಿಗಳಿಗೆ ಐ.ಎ.ಎಸ್.ಗೆ ಬಡ್ತಿ ನೀಡುವ ಸಂಬಂಧದ ಆಯ್ಕೆ ಪ್ರಕ್ರಿಯೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿ ನೀಡಿದ್ದ ತಡೆಯಾಜ್ಞೆಯನ್ನು ಮಂಗವಾರ ತೆರವುಗೊಳಿಸಲಾಗಿದೆ.

ಆದರೆ ಪ್ರಕ್ರಿಯೆ ಅನ್ವಯ ನಡೆಯಲಿರುವ ಆಯ್ಕೆಯು ನ್ಯಾಯಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಖಾಲಿ ಇರುವ ಮೂರು ಸ್ಥಾನಗಳಿಗೆ 1:5ರ ಅನುಪಾತದಲ್ಲಿ 15 ಮಂದಿ ಅಧಿಕಾರಿಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿತ್ತು. ಇದು ಮೆರಿಟ್ ಮತ್ತು ಅರ್ಹತೆ ಮೇಲೆ ಸಿದ್ಧಗೊಂಡಿಲ್ಲ ಎಂದು ಆಕಾಂಕ್ಷಿಗಳಾದ ಸಾರಿಗೆ ಇಲಾಖೆಯ ರಿಚರ್ಡ್ ಡಿಸೋಜಾ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಡಾ.ಕೆ.ಎನ್. ವಿಜಯ ಪ್ರಕಾಶ್ ಅವರು ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದ್ದರು.

ಗ್ರೂಪ್-ಎ ಕಿರಿಯ ವೃಂದದಲ್ಲಿ ಕನಿಷ್ಠ ಎಂಟು ವರ್ಷ ಸೇವೆ ಸಲ್ಲಿಸಿದ ಹಾಗೂ 54 ವರ್ಷದೊಳಗಿನ ಅಧಿಕಾರಿಗಳು ಐಎಎಸ್ಗೆ ಬಡ್ತಿ ಪಡೆಯಲು ಅರ್ಹರು. ಇಂತಹ ವಿವಿಧ ಇಲಾಖೆಗಳ 15 ಮಂದಿ ಅಧಿಕಾರಿಗಳನ್ನು ಸರ್ಕಾರ ಪಟ್ಟಿ ಮಾಡಿದ್ದು, ಅದು ಸರಿ ಇಲ್ಲ ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರುವರಿ ತಿಂಗಳಿನಲ್ಲಿ ನ್ಯಾಯಮಂಡಳಿಯು ಆಯ್ಕೆ ಪ್ರಕ್ರಿಯೆಗೆ ತಡೆ ನೀಡಿತ್ತು. ಅದನ್ನು ಈಗ ತೆರವುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.