ಭಾರತೀಯ ಜನಪ್ರಿಯ ಚಿತ್ರಗಳಲ್ಲಿ ಸಮಕಾಲೀನ ರಾಜಕೀಯವನ್ನು ಅದರ ಯಥಾಸ್ಥಿತಿಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ‘ರಾಜಕೀಯ ಸಿನಿಮಾಗಳು’ ಎಂಬ ಹಣೆಪಟ್ಟಿ ಹೊತ್ತು ಬಂದಂತಹ ಚಿತ್ರಗಳು ಬಹುಪಾಲು ಕನ್ನಡದ ‘ಅಂತ’ದ ಮಾದರಿಯವು. ಅಲ್ಲಿ ರಾಜಕಾರಣಿ ಖಳನಾಗಿರುತ್ತಾನೆ. ನಾಯಕ ಆತನನ್ನು ಗುಂಡಿಟ್ಟು ಕೊಲ್ಲುತ್ತಾನೆ, ಅಷ್ಟೆ. ಹಳೆಯ ನಾಯಕ ಪ್ರಧಾನ ಕತೆಗೆ ರಾಜಕಾರಣದ ಪೋಷಾಕು ತೊಡಿಸಿದ ಕತೆಗಳವು. ಅವುಗಳನ್ನು ರಾಜಕೀಯ ಚಿತ್ರಗಳೆಂದು ಕರೆಯಲಾಗದು.

ಆದರೆ ಹೊಸಅಲೆಯ ಪ್ರಭಾವದಿಂದಲೇ ಹುಟ್ಟಿದ ‘ಅಂಕುರ್’, ‘ಅರ್ಧಸತ್ಯ’ ಮುಂತಾದ ಚಿತ್ರಗಳು ಇಂತಹವಲ್ಲ. ಅವು ಸಮಕಾಲೀನ ಪರಿಸ್ಥಿತಿಯನ್ನು ವಿವರಿಸಿ, ಇವುಗಳಲ್ಲಿ ಸಿಕ್ಕಿ ನರಳುವ ಶ್ರೀಸಾಮಾನ್ಯನ ಕತೆಯನ್ನು ಹೇಳುತ್ತವೆ. ಹೀಗಾಗಿಯೇ ಇಂತಹ ಕೆಲವು ಚಿತ್ರಗಳು ಜನಮಾನಸದೊಳಗೆ ಶಾಶ್ವತ ಸ್ಥಾನ ಪಡೆಯುತ್ತವೆ. ಇಂಥ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ, ಅನುರಾಗ್ ಕಶ್ಯಪ್ ಅವರ ನಿರ್ದೇಶನದ ‘ಗುಲಾಲ್’.

ಇದು 2001ರಲ್ಲಿ ಅನುರಾಗ್ ಅವರು ಸಿದ್ಧಪಡಿಸಿದ ಯೋಚನೆ. ಆದರೆ ಅನೇಕ ಕಾರಣಗಳಿಗಾಗಿ ತಡವಾಗುತ್ತಾ ಸಾಗಿ, ಕೊನೆಗೆ 2009ರಲ್ಲಿ ‘ಗುಲಾಲ್’ ತೆರೆ ಕಾಣುತ್ತದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅನುರಾಗ್ ಯೋಜಿಸಿದ ಒಂದು ಚಿತ್ರವು, ಅವರದ್ದೇ ವೃತ್ತಿ ಜೀವನವು ‘ದೇವ್ ಡಿ’, ‘ಬ್ಲಾಕ್ ಫ್ರೈಡೇ’ ಮುಂತಾದ ಚಿತ್ರಗಳ ಯಶಸ್ಸಿನ ನಂತರ ಬಿಡುಗಡೆಯ ಭಾಗ್ಯವನ್ನು ಪಡೆಯುತ್ತದೆ. ಇದು ಈ ಚಿತ್ರವನ್ನು ನೋಡುವವರೆಲ್ಲರೂ ಗಮನಿಸಬೇಕಾದ ಸಂಗತಿ.

ಚಿತ್ರವೊಂದರ ಹೂರಣವು ಅದು ತಯಾರಾದ ಕಾಲದ ರಾಜಕೀಯ ಹವಾಮಾನವನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ. ಆದರೆ ಚಿತ್ರ ಬಿಡುಗಡೆಯಾಗುವ ಕಾಲಕ್ಕೆ ಅದೇ ರಾಜಕೀಯ ಪರಿಸರ ಇಲ್ಲದೇ ಹೋದಾಗ ಆ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ತಣ್ಣಗಾಗುತ್ತದೆ. ‘ಗುಲಾಲ್’ ಚಿತ್ರದ ಸಂದರ್ಭದಲ್ಲಿಯೂ ಅದೇ ಆಯಿತು. ಈ ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ಶೇ 30ರಷ್ಟು ಮಾತ್ರ ಹಣ ಸಂಗ್ರಹವಾಯಿತು. ಈ ಕಾರಣಕ್ಕಾಗಿ ‘ಗುಲಾಲ್’ ಚಿತ್ರವನ್ನು ಫ್ಲಾಪ್ ಚಿತ್ರಗಳ ಯಾದಿಗೆ ಮಾಧ್ಯಮಗಳು ಸೇರಿಸಿಬಿಟ್ಟವು. ಆದರೆ ‘ಗುಲಾಲ್’ ಜನಪ್ರಿಯ ಸಿನಿಮಾ ಮಾದರಿಗಳ ನಡುವೆ ಅಪರೂಪದ ಪ್ರಯತ್ನ ಆಗಿತ್ತು.

ಕೇ ಕೇ ಮೆನನ್, ಮಾಹಿ ಗಿಲ್, ರಾಜಾಸಿಂಗ್ ಚೌಧರಿ, ಅಭಿಮನ್ಯು ಸಿಂಗ್, ಪಿಯೂಷ್ ಮಿಶ್ರ ಅಭಿನಯವಿದ್ದ ‘ಗುಲಾಲ್’ ಕೊನೆಯ ಕ್ಷಣದವರೆಗೂ ಪ್ರೇಕ್ಷಕನನ್ನು ಒಳಗೊಳ್ಳುವ, ಅಚ್ಚರಿಗಳಿಗೆ ದೂಡುವ ಸಿನಿಮಾ. ರಾಜಕಾರಣ ಮತ್ತು ಯುವಕರು, ಪ್ರೀತಿ ಮತ್ತು ಮೋಸ, ಸೇಡು ಮತ್ತು ಸಂಚಿನ ನಡುವೆ ಹೊಸ ಬದುಕಿನ ಕುರಿತು ವಾಂಛೆ ಎಲ್ಲವೂ ಮೇಳೈಸಿದ ಕತೆಯನ್ನುಳ್ಳ ಚಿತ್ರವಿದು. ಅನೇಕ ಮೈವಳಿಕೆಗಳನ್ನು ಒಂದೇ ಕತೆಗೆ ಹೊಂದಿಸುವುದರ ಪರಿಣಾಮವಾಗಿ ಈ ಚಿತ್ರ ಏಕಕಾಲಕ್ಕೆ ಅನೇಕ ಭಾವವಲಯಗಳನ್ನು ತಾಗುತ್ತದೆ.

ಈ ಮೈವಳಿಕೆಗಳಿಗೆ, ಕಥನ ಪದರಗಳಿಗೆ ಹೊಂದಿಕೊಂಡಂತೆ ಇರುವ ನಾಟಕೀಯ ಗುಣವು ಸಹ ಈ ಸಿನಿಮಾವನ್ನು ಸಹ್ಯವಾಗಿಸುತ್ತದೆ. ‘ದೇವ್ ಡಿ’ ಅನುರಾಗ್ ಕಶ್ಯಪ್ ಅವರ ಅತಿಹೆಚ್ಚು ಜನಪ್ರಿಯತೆ ಪಡೆದ ಸಿನಿಮಾ ಆದರೂ ಆ ಚಿತ್ರಕ್ಕಿಂತ ಹೆಚ್ಚು ಆತ್ಮವಿಶ್ವಾಸವುಳ್ಳ ನಿರೂಪಣೆ ‘ಗುಲಾಲ್’ನಲ್ಲಿದೆ.

ಅನುರಾಗ್ ಕಶ್ಯಪ್ ಅವರು ಈ ಚಿತ್ರದಲ್ಲಿ ಒಂದೇ ತಟ್ಟೆಯಲ್ಲಿ ಹಲವು ಭಕ್ಷ್ಯಗಳನ್ನು ಇಡುತ್ತಾರೆ. ಇಲ್ಲಿ ರ್ಯಾಗಿಂಗ್ ಇದೆ, ವಿದ್ಯಾರ್ಥಿ ಚಳವಳಿಗಳ ಜಡ್ಡುಗಟ್ಟಿದ ಸ್ಥಿತಿಯಿದೆ, ಜಾತಿಗಳನ್ನು ಕುರಿತಂತೆ ಸಮಾಜದಲ್ಲಿರುವ ಪೂರ್ವಗ್ರಹಗಳ ಚರ್ಚೆ ಇದೆ, ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಯಾವುದೋ ಹೆಸರಿನಲ್ಲಿ ಚಳವಳಿ ನಡೆಸುವ ನಾಯಕರಿದ್ದಾರೆ, ಇವರೆಲ್ಲರನ್ನೂ ಮೀರಿದ ಹಿಂಸೆಯೂ ಈ ಚಿತ್ರದಲ್ಲಿ ರಾರಾಜಿಸುತ್ತದೆ.

ರಾಜಸ್ತಾನದಲ್ಲಿ ನಡೆವ ಈ ಕತೆಯ ಕೇಂದ್ರ ಕಥನವೂ ಅಲ್ಲಿ ಹಿಂದೆ ರಾಜರಾಗಿದ್ದವರು ಮರಳಿ ತಮ್ಮ ಕೈಗೆ ಅಧಿಕಾರದ ಸೂತ್ರವನ್ನು ಹಿಡಿಯಲು ಮಾಡುವ ದೇಶವಿಭಜಕ ವಿವರಗಳನ್ನು ಇಟ್ಟುಕೊಂಡಿದೆ. ಈ ವಿಭಜಕ ಶಕ್ತಿಗಳು 1990ರಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಮಾಡಿರುವ ಅನಾಹುತಗಳನ್ನು ಬಲ್ಲವರಿಗೆ ‘ಗುಲಾಲ್’ ಚಿತ್ರವು ಚರ್ಚಿಸುತ್ತಿರುವ ವಿಷಯವು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ.

‘ಗುಲಾಲ್’ನ ಕತೆಯು ಆರಂಭವಾಗುವುದು ಹಳ್ಳಿಯಿಂದ ನಗರಕ್ಕೆ ಕಾನೂನು ಓದಲೆಂದು ಬರುವ ದಿಲೀಪ್ ಸಿಂಗ್ ಎಂಬ ವಿದ್ಯಾರ್ಥಿಯ ಮೂಲಕ. ಆತ ಕಾಲೇಜಿಗೆ ಬಂದ ಅವಧಿಯಲ್ಲಿಯೇ ಆತನಿಗಿಂತ ಹಿರಿಯ ವಿದ್ಯಾರ್ಥಿಯಾದ ರಾಣಾಸಿಂಗ್ ಜೊತೆಗೆ ಇರಬೇಕಾಗುತ್ತದೆ. ಆ ಅವಧಿಯಲ್ಲಿ ದಿಲೀಪ್ಸಿಂಗ್ನ ಜೀವನ ಕ್ರಮ ಮಾತ್ರವಲ್ಲದೆ ಜೀವನದೃಷ್ಟಿಯೇ ಬದಲಾಗುವ ವಿವರಗಳು ಘಟಿಸುತ್ತಾ ಹೋಗುತ್ತವೆ.

ಸ್ಥಳೀಯ ರಾಜಕೀಯ ನಾಯಕ ದುಖೇ ಬಾನಾನು ರಾಣಾನನ್ನು ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಲ್ಲಲು ಹೇಳುತ್ತಾನೆ.ಅಲ್ಲಿಂದಾಗುವ ಘಟನೆಗಳ ಸರಮಾಲೆಯಲ್ಲಿ ಅಮಾಯಕ ದಿಲೀಪ್ ಸ್ವತಃ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನಿಂತು ಗೆಲ್ಲುವ ಹಾಗಾಗುತ್ತದೆ. ಈ ಅವಧಿಯಲ್ಲಿ ದಿಲೀಪ್ಸಿಂಗ್ ತಾನೂ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಹಾಗೂ ಹಿಂಸೆಯಲ್ಲಿ ಸೇರಿಕೊಂಡುಬಿಡುತ್ತಾನೆ. ನಿಧಾನವಾಗಿ ಇವೆಲ್ಲವೂ ದುಖೇ ಬಾನಾನ ಮಹತ್ವಾಕಾಂಕ್ಷೆಯ ಕನಸಿನ ಕುಡಿಗಳು ಎಂದವನಿಗೆ ಅರ್ಥವಾಗುತ್ತದೆ. ಈ ನಡುವೆಯೇ ರಾಜನೊಬ್ಬನಿಗೆ ಹುಟ್ಟಿದ, ಆದರೆ ರಾಜಮನೆತನಕ್ಕೆ ಸೇರದ ಹುಡುಗಿಯೊಬ್ಬಳ ಕತೆಯೂ ಬರುತ್ತದೆ.

ಇದು ಸ್ಥೂಲವಾಗಿ ಕಥೆಯ ಹೂರಣ. ಇವೆಲ್ಲವನ್ನೂ ಅನುರಾಗ್ ಅವರು ರಾಜಸ್ತಾನದ ವೈಶಾಲ್ಯವನ್ನು ತೋರುತ್ತಾ ನಗರ ಜೀವನದ ಒಳಗಿರುವ ನೆರಳು ಬೆಳಕಿನ ಓಣಿಯನ್ನೂ ತೋರುತ್ತಾ, ಆಧುನಿಕತೆಯ ನಡುವೆ ಸೊರಗಿದ ಸನಾತನ ವಿವರಗಳನ್ನು ಕಾಣಿಸುವ ಯತ್ನ ಮಾಡುತ್ತಾರೆ. ಕತೆಯ ಆದಿಯಿಂದ ಅಂತ್ಯದವರೆಗೆ ಪ್ರೇಕ್ಷಕನನ್ನು ಕತೆಯ ನಾಟಕೀಯ ಗುಣಗಳಿಂದಲೇ ಹಿಡಿದಿಡುತ್ತಾರೆ. ಶ್ರೀಮಂತ ಪಾತ್ರಗಳು, ಉಪಕತೆಗಳನ್ನು ನೇರ ನಿರೂಪಣೆಯಲ್ಲಿ ಬಿಡಿಸಿಡುತ್ತಾರೆ. ಇದರಿಂದಾಗಿಯೇ ‘ಗುಲಾಲ್’ ಇದೇ ನಿರ್ದೇಶಕರ ‘ದೇವ್ ಡಿ’ ಮತ್ತು ‘ಬ್ಲಾಕ್ ಫ್ರೈಡೇ’ಗಳಿಗಿಂತ ಹೆಚ್ಚು ಗಾಢವಾಗುತ್ತದೆ.

‘ಗುಲಾಲ್’ನ ಮತ್ತೊಂದು ಮೆಚ್ಚತಕ್ಕ ಅಂಶ ಸಂಗೀತ. ಪೃಥ್ವಿ ಬಾನಾ ಅವರ ಸಾಹಿತ್ಯ ಹಾಗೂ ಪಿಯೂಶ್ ಮಿಶ್ರ ಅವರ ಸಂಗೀತ ಸಂಯೋಜನೆ ನೋಡುಗನನ್ನು ಹಿಡಿದಿಡುತ್ತವೆ. ಎರಡೂವರೆ ಗಂಟೆಗಳ ‘ಗುಲಾಲ್’ನ ಛಾಯಾಗ್ರಹಣವೂ ಉತ್ತಮವಾದುದು.ಒಳಾಂಗಣ ಚಿತ್ರೀಕರಣವಷ್ಟೇ ಅಲ್ಲದೆ ಹೊರಾಂಗಣದ ವೈಶಾಲ್ಯವನ್ನು ತೋರುವಾಗ ತಣ್ಣಗೆ ಇರುವ ಚಿತ್ರಗಳು, ಆ ತಣ್ಣಗಿನ ಆವರಣದ ಒಳಗೇ ಇರುವ ಕ್ರೌರ್ಯವನ್ನು ತೋರುವುದು ಮೆಚ್ಚಿಗೆ ಪಡೆಯುತ್ತದೆ. ಒಟ್ಟಾರೆಯಾಗಿ ಅನುರಾಗ್ ಕಶ್ಯಪ್ ಅವರ ತಂಡ ಒಂದು ಮನತುಂಬುವ ಅನುಭವವನ್ನು ಈ ಚಿತ್ರದ ಮೂಲಕ ನೀಡಿದೆ.

ಕೇವಲ ವಿಶೇಷಣಗಳ ಮೂಲಕ ಏನೇ ಹೇಳಿದರೂ ಚಿತ್ರವೊಂದನ್ನು ನೋಡುವುದು ಪ್ರತಿಯೊಬ್ಬರಿಗೂ ಅನನ್ಯ ಅನುಭವ ಕಟ್ಟಿಕೊಡಬಲ್ಲದು. ಹಾಗಾಗಿ ‘ಗುಲಾಲ್’ ನಮ್ಮ ಸಿನಿಮಾ ವಿದ್ಯಾರ್ಥಿಗಳು ನೋಡಬೇಕಾದ ಚಿತ್ರ. ಕಥನವೊಂದನ್ನು ಬಿಡಿಸಿಡುವ ಕ್ರಮ, ಪಾತ್ರಗಳಿಗೆ ಆರೋಪಿತವಾದ ವ್ತಕ್ತಿತ್ವವನ್ನು ತೆರೆಯ ಮೇಲೆ ದಾಖಲಿಸುವ ಕ್ರಮ, ದೃಶ್ಯದ ಭಾವವನ್ನು ತಲುಪಿಸಲು ಬಳಸುವ ಚಿತ್ರಿಕೆಗಳ ಜೋಡಣೆಯ ಕ್ರಮ, ಆಯಾ ಚಿತ್ರಿಕೆಗಳ ಉದ್ದವನ್ನು ನಿರ್ಧರಿಸುವ ಬಗೆ- ಹೀಗೆ ಹಲವು ವಿವರಗಳು ಒಂದು ಚಿತ್ರವನ್ನು ಸಹ್ಯವಾಗಿಸುತ್ತದೆ. ಆದರೆ ನೋಡಲು ಸಹ್ಯವಾದುದೆಲ್ಲವೂ ಜಿಹ್ವೆಗೆ ಸಹ್ಯವಾಗದು.

ಜಿಹ್ವೆಗೆ ಸಹ್ಯವಾದದ್ದು ಮನಸ್ಸಿನಲ್ಲಿ ಬಹುಕಾಲ ನಿಲ್ಲದು. ಹೀಗಾಗಿಯೇ ಚಿತ್ರ ತಯಾರಿಕೆ ಈ ಆಧುನಿಕ ಕಾಲದಲ್ಲಿ ತಂತಿಯ ಮೇಲಿನ ನಡಿಗೆ. ಕೊಂಚ ಹೆಚ್ಚು ಕಡಿಮೆಯಾದರೂ ಕರಪತ್ರವಾಗಿ ಬಿಡಬಹುದಾದ ಸಾಧ್ಯತೆಯನ್ನು ತಪ್ಪಿಸಿಕೊಂಡು, ಯಾವುದೇ ಒಂದು ವಿವರಕ್ಕೆ ಹೆಚ್ಚು ಕಾಲವನ್ನು ನೀಡಿದರೆ ಕಾವ್ಯಾತ್ಮಕ ಆಗಿಬಿಡಬಹುದಾದ ಸಾಧ್ಯತೆಯಿಂದ ತಪ್ಪಿಸಿಕೊಂಡು ಒಂದು ಸ್ಪಷ್ಟ ರಾಜಕೀಯ ನಿಲುವನ್ನು ಸ್ಥಾಪಿಸುವಲ್ಲಿ ಅನುರಾಗ್ ಕಶ್ಯಪ್ ‘ಗುಲಾಲ್’ನಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲದೇ ಉಳಿಯುವುದರಿಂದಾಗಿ ಅನುರಾಗ್ ಅಂತಹವರು ಮರಳಿ ‘ದೇವ್ ಡಿ’, ‘ಎಮೋಷನಲ್ ಅತ್ಯಾಚಾರ್’ ರೀತಿಯ ರೂಕ್ಷ ನಿರೂಪಣೆಗೆ ಜಾರಿಬಿಡುತ್ತಾರೆ. ಈ ರೂಕ್ಷತೆಯು ತತ್ಕ್ಷಣದ ಜನಪ್ರಿಯತೆಯನ್ನು ತಂದುಕೊಡುತ್ತವೆ. ಆ ಜನಪ್ರಿಯತೆಯಿಂದಾಗಿ ಸಿನಿಮಾ ತಯಾರಕನಿಗೆ ಆರ್ಥಿಕ ನೆಮ್ಮದಿಯೂ ಸಿಗಬಹುದು. ಆದರೆ ಆತನ ಚಿತ್ರವು ಕಲಾಕೃತಿಯಾಗಿ ಬಹುಕಾಲ ಉಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಮ್ಮ ಸಹೃದಯ ಪ್ರೇಕ್ಷಕರು ತಾವು ಯಾವ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಪ್ರಾಯಶಃ ‘ಗುಲಾಲ್’ನಂತಹ ಸಿನಿಮಾಗಳನ್ನು ಡಿವಿಡಿಯಲ್ಲಿಯಾದರೂ ನೋಡಿ, ಆನಂದಿಸಿ.

ಮರಳಿ ಈ ಲೇಖನದ ಆರಂಭದಲ್ಲಿ ಆಡಿದ ಮಾತನ್ನು ನೆನೆಯುತ್ತಾ, ನಮ್ಮ ಬಹುತೇಕ ‘ರಾಜಕೀಯ’ ಸಿನಿಮಾಗಳು ‘ಸಕ್ಕರೆ ಲೇಪಿತ ಸತ್ಯ’ಗಳನ್ನು ಹೇಳಿ, ನೋಡುಗನನ್ನು ಆಲೋಚನೆಗೆ ಹಚ್ಚುವ ಕೆಲಸದಿಂದ ದೂರ ಉಳಿಸುತ್ತವೆ. ಹೀಗಾಗಿಯೇ ಈಚೆಗೆ ಕನ್ನಡದಲ್ಲಿ ಬಂದ ‘ಪೃಥ್ವಿ’ಯಂತಹ ಸಿನಿಮಾ ಸಹ ತನ್ನ ಹೊಸ ಕಥನ ಗುಣದಿಂದ ಇಷ್ಟವಾದರೂ, ಎಲ್ಲವನ್ನೂ ಯಾವನೋ ನಾಯಕ ಸರಿಪಡಿಸುತ್ತಾನೆ ಎಂಬ ಭ್ರಮಾತ್ಮಕ ಸೂತ್ರಕ್ಕೆ ಆ ಸಿನಿಮಾಗಳು ಅಂಟಿಕೊಳ್ಳುವುದರಿಂದಾಗಿ ಪ್ರೇಕ್ಷಕ ರೋಗಗ್ರಸ್ತನಾಗುವ ಸಾಧ್ಯತೆಯಿದೆ. ‘ರಾಜಕೀಯ ಸಿನಿಮಾ’ ಪ್ರೇಕ್ಷಕನಿಗೆ ಸ್ವತಃ ಒಂದು ರಾಜಕೀಯ ನಿಲುವು ತೆಗೆದುಕೊಳ್ಳಲು ಪ್ರಚೋದಿಸುವಂತೆ ಆಗಬೇಕು. ಆಗ ಮಾತ್ರ ಅವು ‘ರಾಜಕೀಯ’ ಸಿನಿಮಾ ಎಂದು ಕರೆಸಿಕೊಳಲಲು ಯೋಗ್ಯವಾಗುತ್ತವೆ. ಈ ನಿಟ್ಟಿನಲ್ಲಿ ‘ಗುಲಾಲ್’ ಗಮನಿಸಬೇಕಾದ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.