ಮಂಗಳೂರು: ಜಿಲ್ಲಾ ಮಟ್ಟದ ಬತ್ತದ ಬೆಳೆ ಸ್ಪರ್ಧೆಯ ಪ್ರಥಮ ಸ್ಥಾನವು ಹೆಕ್ಟೇರ್ನಲ್ಲಿ 97.72 ಕ್ವಿಂಟಲ್ ಬತ್ತ ಬೆಳೆದ ಬಾಳ್ತಿಲ ಗ್ರಾಮದ ಆನಂದ ಶೆಟ್ಟರ ಪಾಲಾಗಿದೆ. ಬಹುಮಾನವಾಗಿ ರೂ. 15 ಸಾವಿರವೂ ದೊರಕಿದೆ.
ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2010-11ನೇ ಸಾಲಿನ ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತರನ್ನು ಗುರುತಿಸಿ ಸನ್ಮಾನಿಸಲಾಯಿತು.

ದ್ವಿತೀಯ ಸ್ಥಾನ ಬೆಳ್ತಂಗಡಿ ತಾಲ್ಲೂಕಿನ ಸೋಣಂದೂರು ಗ್ರಾಮದ ಶಂಕರ ಪ್ರಭು (93.35 ಕ್ವಿಂಟಲ್) ಪಾಲಾಗಿದೆ. ದ್ವಿತೀಯ ಬಹುಮಾನ ಮೊತ್ತ ರೂ 10 ಸಾವಿರ. ಸುಳ್ಯ ತಾಲ್ಲೂಕಿನ ಕಮಲ ರೈ (79.27 ಕ್ವಿಂಟಲ್ ) ತೃತೀಯ ಸ್ಥಾನ (ರೂ. 5 ಸಾವಿರ) ಗಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದು, ಸಮಿತಿ ಸಭೆ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯಕ್ ಪ್ರಜಾವಾಣಿಗೆ ತಿಳಿಸಿದರು.

ಪ್ರಥಮ ಸ್ಥಾನ `ಹಂಚಿಕೆ~:ಮಂಗಳೂರು ತಾಲ್ಲೂಕಿನ ಬತ್ತದ ಬೆಳೆ ಸ್ಪರ್ಧೆಯಲ್ಲಿ ಪಂಜಿಮೊಗರಿನ ಎಲಿಯಾಸ್ ಡಿಸೋಜ (77.91 ಕ್ವಿಂಟಲ್), ಬೆಳ್ಮ ಗ್ರಾಮದ ಡಿ.ಅಬೂಬಕ್ಕರ್ ಪ್ರಥಮ ಸ್ಥಾನ ಹಂಚಿಕೊಂಡರು (ತಲಾ ರೂ 5 ಸಾವಿರ ಬಹುಮಾನ). ದ್ವಿತೀಯ ಸ್ಥಾನ ತಾಳಿಪ್ಪಾಡಿಯ ರಮೇಶ್ ಎನ್. ರಾವ್ (74.920 ಕ್ವಿಂಟಲ್) ಪಾಲಾಗಿದೆ. ಬಹುಮಾನ ಮೊತ್ತ ರೂ 5 ಸಾವಿರ. ಶಿಮಂತೂರು ಗ್ರಾಮದ ಸುಂದರಿ ಶೆಡ್ತಿ (74.15 ಕ್ವಿಂಟಲ್) ತೃತೀಯ ಬಹುಮಾನವಾಗಿ ರೂ 3 ಸಾವಿರ ಪಡೆದರು.

2009 ಮತ್ತು 2010ರಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಜಾನ್ ವೇಗಸ್ ಚೇಳೂರು ಮತ್ತು ಶಂಕರ ಭಟ್ ಅವರನ್ನೂ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.