ಮಡಿಕೇರಿ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಬತ್ತ, ಕಾಳು ಮೆಣಸು, ಅಡಿಕೆ ಮತ್ತು ಶುಂಠಿ ಬೆಳೆ ಬೆಳೆಯುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರವು ಹಲವು ಸಲಹೆ ನೀಡಿದೆ.

ಬತ್ತ: ರೋಗ ರಹಿತ ಬಿತ್ತನೆ ಬೀಜಗಳನ್ನು ಮಾತ್ರ ನಾಟಿಗೆ ಉಪಯೋಗಿಸಬೇಕು. ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 4 ಗ್ರಾಂ ಕಾರ್ಬೆಂಡೆಜಿಮ್ ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆಗೆ ಉಪಯೋಗಿಸಬೇಕು. ನಾಟಿಯನ್ನು ಜುಲೈ ತಿಂಗಳ ಎರಡನೆ ವಾರದೊಳಗೆ ಮಾಡಬೇಕು. ಶಿಫಾರಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು.

ಕಾಳುಮೆಣಸು: ಶೀಘ್ರ ಸೊರಗು ರೋಗವನ್ನು ಹತೋಟಿ ಮಾಡಲು ಪ್ರತೀ ಬಳ್ಳಿಗೆ 50 ರಿಂದ 60 ಗ್ರಾಂ ಟ್ರೈಕೋಡರ್ಮ ವಿರಿಡೆ ಎಂಬ ಜೈವಿಕ ಶಿಲೀಂದ್ರವನ್ನು 1 ಕಿ.ಗ್ರಾಂ ಬೇವಿನ ಹಿಂಡಿ ಅಥವಾ 5 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು. ಮಳೆಗಾಲದಲ್ಲಿ ಮಣ್ಣಿನ ಅಗೆತದ ಕೆಲಸ ಮಾಡಬಾರದು.

ಅಡಿಕೆ: ತೋಟದಲ್ಲಿರುವ ರೋಗ ಪೀಡಿತ ಗೊಂಚಲು ಮತ್ತು ಅಡಿಕೆಕಾಯಿಗಳನ್ನು ಆರಿಸಿ ತೆಗೆದು ನಾಶಗೊಳಿಸಬೇಕು. ಕೊಳೆ ರೋಗವನ್ನು ಹತೋಟಿ ಮಾಡಲು ರೈತರು ಶೇ.1 ರ ಬೋರ್ಡೊ ದ್ರಾವಣದ ಸಿಂಪರಣೆಯನ್ನು ಮೇ ಕೊನೆ ವಾರ ಅಥವಾ ಜೂನ್ ಮೊದಲ ವಾರದೊಳಗೆ ಮಾಡಬೇಕು.

ಶುಂಠಿ: ನಾಟಿಗೆ ಮೊದಲು ಉಪಯೋಗಿಸುವ ಬಿತ್ತನೆಯ ಶುಂಠಿಯನ್ನು ಮ್ಯೋಂಕೋಜೆಬ್ 40 ಗ್ರಾಂನ್ನು 10 ಲೀ. ನೀರಿನಲ್ಲಿ ಬೆರೆಸಿ ತಯಾರಿಸಿದ ದ್ರಾವಣದಲ್ಲಿ 30 ನಿಮಿಷಗಳ ಕಾಲ ಉಪಚರಿಸಿ ನಾಟಿ ಮಾಡಬೇಕು. ಈಗಾಗಲೇ ನಾಟಿ ಮಾಡಿರುವ ಅಥವಾ ಮೊಳೆಕೆ ಬಂದಿರುವ ಶುಂಠಿಯಲ್ಲಿ ಕಾಂಡಕೊರೆಯುವ ಹುಳುವಿನ ಸಮಸ್ಯೆ ಬರುವ ಸಂಭವವಿದ್ದು, ಮುಂಜಾಗ್ರತೆಗಾಗಿ ಲ್ಯಾಬ್ಡಸೆಹ್ಯಾಲೋತ್ರಿನ್ (ಕರಾಟೆ) 1 ಮಿಲಿಯನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಮಾಹಿತಿಗೆ ಗೋಣಿಕೊಪ್ಪಲಿನ ಕೊಡಗು ಕೃಷಿ ವಿಜ್ಞಾನ ಕೇಂದ್ರದ ಕೆ.ವಿ. ವೀರೇಂದ್ರ ಕುಮಾರ್ ಅವರ ಮೊ 9481180279 ಅಥವಾ ದೂರವಾಣಿ: 08274-247274 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.