ಅಶ್ವಿನ್ಗೆ ಕೈ ಕಾಲುಗಳು ಸ್ವಾಧೀನದಲ್ಲಿಲ್ಲ. ಆದರೂ ಏನಾದರೂ ಸಾಧಿಸಬೇಕೆಂಬ ಛಲ. ಸಾಹಿತ್ಯದಲ್ಲಿ ಎಲ್ಲಿಲ್ಲದ ಆಸಕ್ತಿ. ಸಿನಿಮಾ ಗೀತೆಗಳಿಗೆ ಸಾಹಿತ್ಯ ಬರೆಯಬೇಕೆಂಬ ಕನಸು ಕಂಡವನು. ಸ್ಯಾಂಡಲ್ವುಡ್ನಂಥ ಬೃಹತ್ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದೆಂದರೆ ಅದು ಕನಸಿನ ಮಾತೇ ಸರಿ. ಆದರೆ ಅಶ್ವಿನ್ಗೆ ಒಂದು ಚಾನ್ಸ್ ಸಿಕ್ಕಿದೆ. ಅದು ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಅವರ ಬಳಿ.

ರಾಜ್ಯದ ಸೆಲೆಬ್ರಿಟಿಯೊಬ್ಬರ ಜೊತೆ ಒಂದು ದಿನ ಕಾಲ ಕಳೆಯಬೇಕೆಂಬ ಕ್ಯಾಬ್ ಡ್ರೈವರ್ ಆಸೆ ಈಡೇರಿದೆ. ಆ ಸೆಲೆಬ್ರೆಟಿ ಯಾರು ಗೊತ್ತಾ? ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ. ಅಂದು ಕ್ಯಾಬ್ ಚಾಲಕನ ಮನೆಯಿಂದ ಹೊರಟು, ಆತನ ಇಷ್ಟವಾದ ಹೋಟೆಲ್ಗೆ, ಸ್ಥಳಗಳಿಗೆ ಹೋಗುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಳ್ಳಲಿದ್ದಾನೆ. ಇದಕ್ಕೆ ಸಂತೋಷ ಹೆಗ್ಡೆ ಅವರ ಒಪ್ಪಿಗೆಯೂ ಸಿಕ್ಕಿದೆಯಂತೆ.

ಇದೆಲ್ಲಾ ಸಾಧ್ಯವಾದದ್ದು 93.5 ರೆಡ್ ಎಫ್.ಎಂ ವಾಹಿನಿಯು ನಡೆಸುತ್ತಿರುವ `ಒಂದು ಚಾನ್ಸ್~ ಕಾರ್ಯಕ್ರಮದ ಮೂಲಕ. ನೊಂದವರ, ಕನಸು ಕಂಡವರ ಬಾಳಿಗೆ ಸಲಹೆ ನೀಡುವ ಪ್ರಯತ್ನವಾಗಿ ನಡೆಸುತ್ತಿರುವ `ಸವಿ ಸವಿ ನೆನಪು~ ಕಾರ್ಯಕ್ರಮದ ಭಾಗವಾಗಿ `ಒಂದು ಚಾನ್ಸ್~ ವಿಶೇಷ ಕಾರ್ಯಕ್ರಮವನ್ನು ವಾಹಿನಿಯು ನಡೆಸುತ್ತಿದೆ. ಇಲ್ಲಿ ಪ್ರತಿಭಾವಂತರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಕನಸಿನ ಗೂಡು ಕಟ್ಟಿಕೊಂಡವರಿಗೆ ದಾರಿ ತೋರುವ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.

ಜ.4ರಿಂದ ಆರಂಭಿಸಿರುವ ಕಾರ್ಯಕ್ರಮದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಮಂದಿ ಕರೆ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಎಂಟು ಮಂದಿಗೆ ಅವರ ಆಸೆಗನುಗುಣವಾಗಿ ಒಂದು ಚಾನ್ಸ್ ಸಹ ದೊರೆಕಿದೆ.

ಸಂಸ್ಥೆಯೊಂದರಲ್ಲಿ ಬೆಳೆಯುತ್ತಿರುವ ಅವಕಾಶ ವಂಚಿತ ಮಕ್ಕಳ ಪರವಾಗಿ 6ವರ್ಷದ ಬಾಲಕಿ ಕಾರ್ಯಕ್ರಮಕ್ಕೆ ಕರೆ ಮಾಡಿದ್ದಳು. ತನ್ನ ಸ್ನೇಹಿತರೊಂದಿಗೆ `ಜೆಮಿನಿ ಸರ್ಕಸ್~ ನೋಡಬೇಕೆಂಬ ಬಯಕೆ. ಆ ಚಿಕ್ಕ ಬಾಲಕಿಯ ಆಸೆಯಂತೆ `ಒಂದು ಚಾನ್ಸ್~ ತಂಡ 160 ಮಕ್ಕಳನ್ನು ಸರ್ಕಸ್ಗೆ ಕರೆದುಕೊಂಡು ಹೋಗಿತ್ತು. ಆ ಬಾಲಕಿ ಆಸೆಯಿಂದ ಉಳಿದ ಸ್ನೇಹಿತರೆಲ್ಲಾ ಸಂತೋಷ ಹಂಚಿಕೊಂಡಿದ್ದು ಮಾತ್ರ ಅವಿಸ್ಮರಣೀಯ ಎನ್ನುತ್ತಾರೆ ಆರ್.ಜೆ. ನವೀನ್.

ಮತ್ತೊಂದೆಡೆ ನಿತ್ಯ ಬ್ಯೂಸಿ ಇರುವ ಆಟೊ ಚಾಲಕರು ಸಹ ತಮ್ಮ ಆಸೆಯ ಗರಿ ಬಿಚ್ಚಿಕೊಂಡಿದ್ದರಂತೆ. ಇತ್ತೀಚೆಗೆ ಮುಕ್ತಾಯವಾದ ಸಿಸಿಎಲ್ನ ಪಂದ್ಯ ವೀಕ್ಷಿಸಬೇಕೆಂಬ ಆಸೆ. ನೂರು ಆಟೊ ಚಾಲಕರನ್ನು ಸಿಸಿಎಲ್ ಪಂದ್ಯ ವೀಕ್ಷಣೆಗೆ ರೆಡಿಯೊ ಜಾಕಿ ಪ್ರದೀಪ್ ತಂಡ ಕರೆದುಕೊಂಡು ಹೋಗಿತ್ತು. ಅವರ ಆಸೆಯಂತೆ ಪಂದ್ಯವನ್ನೂ ವೀಕ್ಷಿಸಿದರು.

ಗಾಯಕನಾಬೇಕೆಂಬ ಹಂಬಲದಲ್ಲಿದ್ದ ಕೆಳಮಧ್ಯಮ ವರ್ಗದ ಸಂತೋಷ್ಗೆ ಒಂದು ಚಾನ್ಸ್ ಸಿಕ್ಕಿದೆ. ಆತ ರೆಡ್ ಎಫ್.ಎಂ. ಕೇಳುಗ. ಕಾರ್ಯಕ್ರಮ ವೀಕ್ಷಿಸಿ, ತನಗೂ ಒಂದು ಚಾನ್ಸ್ ಸಿಗಬಹುದೆಂಬ ಭರವಸೆಯೊಂದಿಗೆ ಕರೆ ಮಾಡಿದ್ದಾನೆ. ಈತನ ಪ್ರತಿಭೆಯನ್ನು ಗಮನಿಸಿದ ಕಾರ್ಯಕ್ರಮ ಆಯೋಜಕರು. `ವೈ ದಿಸ್ ಕೊಲವೆರಿ~ ಹಾಡಿನ ಸಂಗೀತ ನಿರ್ದೇಶಕ ಅನಿರುದ್ಧ ಅವರ ಬಳಿ ಚಾನ್ಸ್ ಕೊಡಿಸಿದ್ದಾರೆ.

ರೆಡ್ ಎಫ್. ಎಂ ನಲ್ಲಿ ನಿತ್ಯ ರಾತ್ರಿ 9ರಿಂದ 12ರವರೆಗೆ ಪ್ರಸಾರವಾಗುವ `ಒಂದು ಚಾನ್ಸ್~ ಕಾರ್ಯಕ್ರಮದ ಮೂಲಕ ನೀವು ಸಹ ನಿಮ್ಮ ಕನಸಿಗೆ ಜೀವ ತುಂಬಿಕೊಳ್ಳಬಹುದು.

ಅಥವಾ RED B<sapce>name and chance ಎಂದು ಬರೆದು 58585 ನಂಬರಿಗೆ ಸಂದೇಶ ಕಳುಹಿಸಬಹುದು. ಶನಿವಾರ (ಜ.21) ಕಾರ್ಯಕ್ರಮ ಮುಕ್ತಾಯ. ನೀವೂ ನಿಮ್ಮ ಆಸೆ, ಕನಸನ್ನು ನನಸಾಗಿಸಿಕೊಳ್ಳಲು ಒಂದು ಅವಕಾಶ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.