ಕೋಲಾರ: ಕ್ಷೇಮ ಪಾಲಕರೇ ಇಲ್ಲದ ಸ್ಥಿತಿ, ವಿತರಣೆಯಾಗದ ಕ್ರೀಡಾ ಕಿಟ್, ಹರಿದ ಶೂಗಳನ್ನೇ ಧರಿಸಿ ಓಟದ ಅಭ್ಯಾಸ ಮಾಡುವ ಕ್ರೀಡಾಪಟುಗಳು, ಬೇಳೆಯೇ ಇಲ್ಲದ ಸಾರು ಬಡಿಸುವ ಸಿಬ್ಬಂದಿ, ನೀರಿನ ಕೊರತೆ, ದೊಡ್ಡ ಜನರೇಟರ್ ಇದ್ದರೂ ಬಳಸದಿರುವುದು, ನಿಜದಲ್ಲಿ ಇಲ್ಲದಿದ್ದರೂ ಹಾಜರಾತಿ ಪುಸ್ತಕದಲ್ಲಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿರುವುದು, ವೈದ್ಯರ ಸೇವೆಯನ್ನು ನೀಡದೇ ಕ್ರೀಡಾಪಟುಗಳನ್ನು ಮನೆಗೆ ಕಳಿಸುವುದು, ಹೇರ್ಕಟ್ ಸೌಕರ್ಯವೂ ಇಲ್ಲ,....

– ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದ ಸಂಗತಿಗಳಿವು.
ಉಪವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್ ನಿಲಯಕ್ಕೆ ದಿಢೀರನೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರು ಸಾಕಷ್ಟು ಅಚ್ಚರಿಗಳಿಗೆ ಮುಖಾಮುಖಿಯಾದರು. ನಿಲಯದ ಅವ್ಯವಸ್ಥೆಯನ್ನು ಕಂಡು ತೀವ್ರ ವಿಷಾದವನ್ನೂ ವ್ಯಕ್ತಪಡಿಸಿದರು. ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ವಿಫಲರಾದರು. ಪರಿಣಾಮವಾಗಿ, ಉಪವಿಭಾಗಾಧಿಕಾರಿಗಳು ವಸತಿ ನಿಲಯದ ಮಕ್ಕಳೊಡನೆ ಮತ್ತೆ ಪ್ರತ್ಯೇಕವಾಗಿ ಚರ್ಚಿಸಿ ಮಾಹಿತಿಗಳನ್ನು ಪಡೆದರು.

ಬೆಳಿಗ್ಗೆ 7.30ರ ವೇಳೆಗೆ ತಹಶೀಲ್ದಾರ್ ನಾಗರಾಜ್ ಅವರೊಡನೆ ನಿಲಯಕ್ಕೆ ಬಂದ ಮಂಜುನಾಥ್, ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಮಾಹಿತಿಗಳನ್ನು ಪಡೆದರು. ನಿಲಯದಲ್ಲಿ ಓಡಾಡಿ ಪರಿಶೀಲನೆ ಮಾಡಿದರು. ವಿದ್ಯಾರ್ಥಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸ್ಥಳಲ್ಲಿ ಇರದ ಕೆಲವು ಕ್ರೀಡಾಪಟುಗಳು ನಂತರದಲ್ಲಿ ದೀಢೀರನೆ ಪ್ರತ್ಯಕ್ಷರಾಗಿದ್ದು ಕಂಡು ಅನುಮಾನವನ್ನೂ ವ್ಯಕ್ತಪಡಿಸಿದರು.

ಹಾಜರಾತಿ: ಹಾಜರಾತಿ ಪುಸ್ತಕ ಕೊಡಿ ಎಂಬ ಅವರ ಪ್ರಶ್ನೆಗೆ ತಕ್ಕಂತೆ ಕೂಡಲೇ ಅದನ್ನು ನೀಡುವ ಬದಲು, ಅಧಿಕಾರಿ ರುದ್ರಪ್ಪ ಸಬೂಬುಗಳನ್ನು ಹೇಳತೊಡಗಿದರು. ಎಷ್ಟು ಹೊತ್ತು ಸಬೂಬು ಹೇಳ್ತೀರಿ? ಎಂದು ಉಪವಿಭಾಗಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕವಷ್ಟೇ ಭದ್ರತಾ ಸಿಬ್ಬಂದಿ ಅದನ್ನು ನೀಡಿದರು.

ಹಾಜರಾತಿ ಪುಸ್ತಕವನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ, ದಾಖಲಾಗಿದ್ದ 24 ವಿದ್ಯಾರ್ಥಿಗಳ ಪೈಕಿ 17 ಮಂದಿ ಮಾತ್ರ ಹಾಜರಾಗಿದ್ದು ಕಂಡುಬಂತು. ಉಳಿದವರು ಎಲ್ಲಿ? ಎಂಬ ಪ್ರಶ್ನೆಗೆ ಅಧಿಕಾರಿ ರುದ್ರಪ್ಪ, ಊರಿಗೆ ಹೋಗಿದ್ದಾರೆ ಎಂದು ಹೇಳಿದರು. ಸ್ಥಳದಲ್ಲಿ, ಅಥ್ಲೆಟಿಕ್ಸ್ ತರಬೇತಿ ಪಡೆಯುವ 13 ಮತ್ತು ಫುಟ್ಬಾಲ್ ತರಬೇತಿ ಪಡೆಯುವ ನಾಲ್ವರು ವಿದ್ಯಾರ್ಥಿಗಳಷ್ಟೇ ಇದ್ದರು. ಹಾಜರಾತಿ ಪರಿಶೀಲಿಸಿದ ಬಳಿಕ ಮೂವರು ವಿದ್ಯಾರ್ಥಿಗಳು ಹೊರಗಿನಿಂದ ಬಂದರು.

ನೀವು ಯಾರು? ಎಂಬ ಉಪವಿಭಾಗಾಧಿಕಾರಿ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಲಿಲ್ಲ.
ವಿದ್ಯಾರ್ಥಿನಿಯೊಬ್ಬರಿಗೆ ಜ್ವರ ಇರುವುದರಿಂದ ಅವರು ಮನೆಗೆ ಹೋಗಿದ್ದಾರೆ ಎಂಬ ಮಾತು ಕೇಳಿ ಅವರು ಮತ್ತೆ ಪ್ರಶ್ನಿಸಿದರು. ವೈದ್ಯರನ್ನು ಕರೆಸಿ ಇಲ್ಲಿಯೇ ವಿದ್ಯಾರ್ಥಿನಿಗೆ ಚಿಕಿತ್ಸೆ ಏಕೆ ಕೊಡಲಿಲ್ಲ? ಅದಕ್ಕೆ ಅಧಿಕಾರಿ ಬಳಿ ಉತ್ತರ ಇರಲಿಲ್ಲ. ಕ್ರೀಡಾಪಟುಗಳ ಹಾಜರಾತಿ ದಾಖಲು ಮಾಡಲು ಬಯೋಮೆಟ್ರಿಕ್ ಯಂತ್ರ ಕೆಟ್ಟಿದ್ದು ಕಂಡು ಬಂತು.

ಕೆಲವರು ನಿಲಯಕ್ಕೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಹೋಗುತ್ತಾರೆ. ಅವರು ನಿಲಯದಲ್ಲಿ ಇರುವುದಿಲ್ಲ. ತರಬೇತಿಗೂ ಬರುವುದಿಲ್ಲ ಎಂದು ಕ್ರೀಡಾಪಟುಗಳು ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಮನಕ್ಕೆ ತಂದರು. ರಾತ್ರಿ 11.30ರವರೆಗೂ ಓದಿಕೊಳ್ಳಬೇಕು. ಬೆಳಿಗ್ಗೆ 5 ಗಂಟೆಗೆ ಏಳಬೇಕಾಗಿದೆ. ನಿಲಯದಲ್ಲಿ ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವವರೇ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹೊಂದಾಣಿಕೆ ಕೊರತೆ:
ಕ್ರೀಡಾಪಟುಗಳಿಗೆ ಕ್ರೀಡಾಸಾಮಗ್ರಿ ನೀಡುವ ಕುರಿತು ನೀವು ಏಕೆ ಮುತುವರ್ಜಿ ವಹಿಸಿಲ್ಲ ಎಂದು ಉಪವಿಭಾಗಾಧಿಕಾರಿಯು ಜಿಲ್ಲಾ ಅಥ್ಲೆಟಿಕ್ ತರಬೇತುದಾರರಾದ ಪಿ.ಎಲ್.ಶಂಕರಪ್ಪ ಅವರನ್ನು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಶಂಕರಪ್ಪ, ತಮ್ಮನ್ನು ಮೈದಾನದಲ್ಲಿ ಅಥ್ಲೆಟಿಕ್ಸ್ ತರಬೇತಿ ನೀಡಲಷ್ಟೇ ನಿಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಬೇಕು ಎಂದು ಈಗಾಗಲೇ ಸಹಾಯಕ ನಿರ್ದೇಶಕರನ್ನು ಕೋರಲಾಗಿತ್ತು. ಆದರೆ ಅವರು ಪೂರೈಸಿಲ್ಲ. ಅದನ್ನು ಪ್ರಶ್ನಿಸುವ ಅಧಿಕಾರ ಕೇವಲ ತರಬೇತುದಾರರಾದ ತಮಗೆ ಇಲ್ಲ ಎಂದು ಹೇಳಿದರು.

ಅಧಿಕಾರಿ ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆಯ ಕೊರತೆಯೇ ನಿಲಯದ ಅವ್ಯವಸ್ಥೆಗೆ ಕಾರಣ ಎಂದು ಇದೇ ಸಂದರ್ಭದಲ್ಲಿ, ನಿಲಯಕ್ಕೆ ಆಹಾರ ಪೂರೈಸುವ ಗುತ್ತಿಗೆದಾರ, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.