ಮೊಳಕಾಲ್ಮುರು: ದಿನ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದಾಗಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದಾರೆ.
ಪಟ್ಟಣದಲ್ಲಿ 38-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಕಚೇರಿ ಸೇರಿದಂತೆ ನಾನಾ ಕಾರಣಗಳಿಗಾಗಿ ಇಲ್ಲಿಗೆ ಬರುವ ಜನತೆ ಬಿಸಲಿನ ತಾಪ ತೀರಿಸಿಕೊಳ್ಳಲು, ನೆರಳಿನ ಆಶ್ರಯಕ್ಕಾಗಿ ತೊಂದರೆಪಡುವ ದೃಶ್ಯಗಳು ಸಾಮಾನ್ಯವಾಗಿವೆ. ಹಣ್ಣಿನ ಬೆಲೆ ಸಹ ಹೆಚ್ಚಾಗಿದೆ.

ಇದರಿಂದಾಗಿ ರಸ್ತೆಬದಿಯಲ್ಲಿ ದೊರೆಯುವ ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳ ಮೊರೆ ಹೋಗಿರುವುದು ಕಂಡುಬರುತ್ತಿದೆ.

ತಾಲ್ಲೂಕಿನಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಕೇಳಿಬರುತ್ತಿದೆ. ಸುಮಾರು 9 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ವರದಿ ಸಲ್ಲಿಸಿದೆ. ಮೂರು ಕಡೆ ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ 10 ಸಾವಿರ ಜಾನುವಾರುಗಳು ಆಶ್ರಯ ಪಡೆದಿವೆ.

ದೇವಸಮುದ್ರ ಹೋಬಳಿಯಲ್ಲಿ ಗುಳೆ ಹೆಚ್ಚಿದೆ. ಉದ್ಯೋಗಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಮತ್ತು ಕೂಲಿ ದೊರೆಯುತ್ತಿದೆ ಎಂಬ `ಯಕ್ಷಪ್ರಶ್ನೆ~ಗೆ ಎಲ್ಲಿಯೂ ಉತ್ತರ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ.

ಕಳೆದ ವರ್ಷ ಬೆಳೆ ಪೂರ್ಣವಾಗಿ ಕೈಕೊಟ್ಟಿರುವ ಕಾರಣ ಈ ಭಾಗದ ಪ್ರಮುಖ ಬೆಳೆಯಾದ ಶೇಂಗಾವನ್ನು ಈ ವರ್ಷ ಬಿತ್ತನೆ ಮಾಡಲು ರೈತರ ಬಳಿ ಬಿತ್ತನೆ ಬೀಜವಿಲ್ಲ. ಈ ಬಾರಿ ರೂ6 ಸಾವಿರ ಕ್ವಿಂಟಲ್ಗೆ ಪಾವತಿಸಿ ಬಿತ್ತನೆ ಖರ್ಚು ನಿಭಾಯಿಸಲು ಸಾಧ್ಯವಾಗದೆ ಹೊಲವನ್ನು ಬೀಳು ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರಾದ ತಿಪ್ಪೇಸ್ವಾಮಿ, ಮಲ್ಲಿಕಾರ್ಜುಪ್ಪ, ನಾಗಣ್ಣ, ಅಜ್ಜಯ್ಯ ಇತರರು ಹೇಳುತ್ತಾರೆ.

ಕಳೆದ ಒಂದು ದಶಕದಲ್ಲಿಯೇ ಭೀಕರ ಎಂದು ಬಣ್ಣಿಸಲಾಗುತ್ತಿರುವ ಈ ಬಾರಿಯ ಬರಸ್ಥಿತಿ ನಿರ್ವಹಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ನೆರವಿಗೆ ಬರಬೇಕು ಎಂಬುದು ಸಾರ್ವಜನಿಕರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.