ತುಮಕೂರು: ಬೆಂಗಳೂರಿನ ಉಪನಗರಿಯ ಕನಸು ಹೊತ್ತು ನಿಂತಿರುವ ಕಲ್ಪತರು ನಾಡಿನ ಜನರ ಕನಸು, ನಿರೀಕ್ಷೆಗಳಿಗೆ ಸಿಎಂ ಡಿ.ವಿ.ಸದಾನಂದಗೌಡ ಮಂಡಿಸಿದ ಚೊಚ್ಚಲ ಬಜೆಟ್ ನಿರಾಸೆ ಮೂಡಿಸುವಂತಿದೆ.
ಜಿಲ್ಲೆಗೆ ಬಜೆಟ್ ದೊಡ್ಡ ಕೊಡುಗೆ ಕೊಟ್ಟಿಲ್ಲ. ತಿಪಟೂರು ತಾಲ್ಲೂಕಿಗೆ ಬಂಪರ್ ಕೊಡುಗೆ ನೀಡಿದೆ. ಆದರೆ ಉಳಿದ ತಾಲ್ಲೂಕುಗಳಿಗೆ ಏನನ್ನು ಕೊಟ್ಟಿಲ್ಲ.

ಜಿಲ್ಲೆ ಕಾಡುತ್ತಿರುವ ಬರ ನಿರ್ಮೂಲನೆಗೆ ಶಾಶ್ವತ ನೀರಾವರಿ ಕುರಿತು ದೃಢ ನಿಲುವು ಪ್ರಕಟಿಸಲಾಗಿಲ್ಲ. ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಜಾರಿ ಮಾತನಾಡಿದ್ದರೂ; ಬಜೆಟ್ನಲ್ಲಿ ಕೇವಲ ರೂ. 400 ಕೋಟಿ ನೀಡುವ ಮೂಲಕ ಕಣ್ಣೊರೆಸುವ ತಂತ್ರವನ್ನಷ್ಟೇ ಮಾಡಲಾಗಿದೆ.

ಎತ್ತಿನಹೊಳೆ ಯೋಜನೆಗೆ ಕಳೆದ ವರ್ಷ ನೀಡಿದ ರೂ.200 ಕೋಟಿಯಲ್ಲಿ ಇದೂವರೆಗೂ ನಯಾಪೈಸೆ ಬಳಸಿಕೊಂಡಿಲ್ಲ. ಏಳೆಂಟು ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ ಈಗ ರೂ.400 ಕೋಟಿ ನೀಡಲಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದರೂ ಎತ್ತಿನಹೊಳೆ ಯೋಜನೆ ಜಾರಿಯಿಂದ ಈ ಭಾಗದಜನರ ಸಂಕಷ್ಟ ತೀರುವುದಿಲ್ಲ. ಕೇವಲ 24 ಟಿಎಂಸಿ ನೀರು ದೊರೆಯುವುದರಿಂದ ಯಾವುದೇ ಪ್ರಯೋಜನವಾಗದು ಎನ್ನಲಾಗಿದೆ.

ಪರಮಶಿವಯ್ಯ ವರದಿ ಜಾರಿಯಿಂದ ಮಾತ್ರವೇ ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬ ಆಶಾಭಾವನೆ ಇದೆ. ಆದರೆ ಈ ಸಂಬಂಧ ಬಜೆಟ್ನಲ್ಲಿ ಯಾವುದೇ ನಿರ್ಧಾರ ಪ್ರಕಟವಾಗದೇ ಇರುವುದು ನಿರಾಸೆಗೆ ಕಾರಣವಾಗಿದೆ.

ಸುಮಾರು ರೂ. 30 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಿರುವ ಪರಮಶಿವಯ್ಯ ವರದಿ ಜಾರಿ ಸಂಬಂಧ ಬಜೆಟ್ನಲ್ಲಿ ಒಂದು ಐತಿಹಾಸಿಕ ನಿಲುವು ಪ್ರಕಟವಾಗಲಿದೆ ಎಂದು ಕಾದಿದ್ದ ಜನತೆ ಒಂದು ರೀತಿ ಶಾಕ್ಗೆ ಒಳಗಾದರು.

ಜಿಲ್ಲೆಯಿಂದ ವಾರ್ಷಿಕವಾಗಿ 500 ಟಿಎಂಸಿ ನೀರು ಕೃಷ್ಣಾ ಕಣಿವೆ ಮೂಲಕ ಸಮುದ್ರ ಸೇರುತ್ತಿದೆ. ಕೃಷ್ಣಾ ಕಣಿವೆಯಿಂದ ಇಲ್ಲಿವರೆಗೂ ಒಂದು ಹನಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕೃಷ್ಣಾ ಕಣಿವೆ ನೀರನ್ನು ಬಳಸಿಕೊಳ್ಳಬೇಕೆಂಬ ಕೂಗಿಗೂ ಬಜೆಟ್ ಉತ್ತರ ನೀಡಿಲ್ಲ.

ಗುಬ್ಬಿಗೆ ಬರಲಿದೆ ಎಂದು ಹೇಳಲಾಗುತ್ತಿದ್ದ ತೆಂಗು ಟೆಕ್ನಾಲಜಿ ಪಾರ್ಕ್ ತಿಪಟೂರು ಪಾಲಾಗಿದೆ. ರೂ.100ಕೋಟಿ ವೆಚ್ಚದಲ್ಲಿ ಸ್ಥಾಪನೆ ಆಗಲಿದೆ ಎಂದು ಹೇಳಲಾಗುತ್ತಿರುವ ಈ ಪಾರ್ಕ್ ಸ್ಥಾಪನೆಗೆ ಬಜೆಟ್ನಲ್ಲಿ ರೂ.10 ಕೋಟಿ ಮೀಸಲಿಡಲಾಗಿದೆ. ಅದೇ ರೀತಿ ಕೊನೇಹಳ್ಳಿಯಲ್ಲಿ ಅಗ್ರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡುವುದಾಗಿ ಪ್ರಕಟಿಸಲಾಗಿದೆ. ಈ ಕಾಲೇಜಿನ ರೂಪುರೇಷೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇವಿಷ್ಟೇ ಜಿಲ್ಲೆಯ ಜನತೆಗೆ ಹರ್ಷದಾಯಕ ಸಂಗತಿಗಳು.

ಬೆಂಗಳೂರಿಗೆ ಹತ್ತಿರ ಇರುವ ಕಾರಣ ಬೆಂಗಳೂರಿನ ಪರ್ಯಾಯ ನಗರವಾಗಿ ತುಮಕೂರು ಅಭಿವೃದ್ಧಿಪಡಿಸುವ ಮುನ್ನೋಟವನ್ನು ಬಜೆಟ್ನಲ್ಲಿ ನೀಡಬಹುದಿತ್ತು. ತೆಂಗು ಬೆಳೆಯಂತೆ ಅಡಿಕೆ ಬೆಳೆಯೂ ಜಿಲ್ಲೆಯಲ್ಲಿ ಪ್ರಧಾನವಾಗಿದೆ. ರಾಗಿ ಕೂಡ ಪ್ರಧಾನವಾಗಿ ಬೆಳೆಯಲಾಗುತ್ತಿದೆ. ಈ ಎರಡು ಬೆಳೆಗಳನ್ನು ಬೆಂಬಲಿಸುವಂತ ಯಾವುದೇ ಯೋಜನೆ ಜಿಲ್ಲೆಗೆ ಸಂದಿಲ್ಲ.

ಜಿಲ್ಲೆಗೆ ಬೃಹತ್ ಯೋಜನೆ ಸಿಕ್ಕಿಲ್ಲ. ಸ್ಥಳೀಯ ಶಾಸಕರು ಸಿಎಂ ಮೇಲೆ ಪ್ರಬಲ ಒತ್ತಡ ಹಾಕಿದ್ದರೆ ಮತ್ತಷ್ಟು ಯೋಜನೆ, ಅನುಕೂಲ ಪಡೆಯಬಹುದಿತ್ತು ಎಂಬ ಮಾತುಗಳು ಈಗ ಕೇಳಿಬರತೊಡಗಿವೆ. ಏನನ್ನು ಕೊಡದಿದ್ದರೂ ಕೊನೆ ಪಕ್ಷ ಕುಡಿಯುವ ನೀರಿನ ದಾಹವನ್ನಾದರೂ ಬಜೆಟ್ ಇಂಗಿಸಬೇಕಾಗಿತ್ತು ಎಂಬುದು ಬಹುತೇಕರ ಅನಿಸಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.