ಶುಕ್ರವಾರ, ಆಗಸ್ಟ್ 7, 2020
25 °C

ಬರ್ಫಿ ನನಗಿಷ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಫಿ ನನಗಿಷ್ಟ!

ವಿಭಿನ್ನ ಪಾತ್ರಗಳಿಂದ ಗಮನ ಸೆಳೆದ ಪ್ರಿಯಾಂಕಾ ಚೋಪ್ರಾ ಇದೀಗ `ಬರ್ಫಿ~ ಚಿತ್ರದ ಪಾತ್ರ ತಮಗಿಷ್ಟವಾಯಿತು ಎಂದು ಹೇಳಿದ್ದಾರೆ.ತಾವು ನಿಭಾಯಿಸಿದ ಎಲ್ಲ ಪಾತ್ರಗಳಲ್ಲಿಯೂ ಇಷ್ಟವಾದ ಪಾತ್ರವಿದು. ಅನುರಾಗ್ ಬಸು ಅವರ ಪರಿಕಲ್ಪನೆಯ ಪಾತ್ರ ಇದು. ಮೊದಲೆಲ್ಲ ನಿಭಾಯಿಸುವುದು ಕಷ್ಟ ಎನಿಸಿತ್ತು. ಕಷ್ಟವೂ ಆಗಿತ್ತು. ಆದರೆ ಇದೀಗ ಝಿಲ್‌ಮಿಲ್ ನನ್ನ ಹೃದಯಕ್ಕೆ ಸಮೀಪದ ಪಾತ್ರವಾಗಿದೆ. ನನ್ನ ಹೃದಯವೇ ಆಗಿದೆ. ರಣಬೀರ್ ಕಪೂರ್ ಜೊತೆಗೆ ಪ್ರಿಯಾಂಕಾ ಬರ್ಫಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಇಲ್ಲಿ ಮೂಗ ಹಾಗೂ ಕಿವುಡನ ಪಾತ್ರ ನಿರ್ವಹಿಸುತ್ತಿದ್ದಾರೆ. ಅಂಗವಿಕಲರ ಬದುಕು ಕತ್ತಲೆಯಲ್ಲಿಯೇ ಮುಳುಗಿರುತ್ತದೆ ಎಂಬುದೇ ತಪ್ಪು ಗ್ರಹಿಕೆಯಾಗಿದೆ. ಅವರ ಬದುಕಿನಲ್ಲಿಯೂ ಸಂತೋಷದ ಕ್ಷಣಗಳಿರುತ್ತವೆ. ಅವರೂ ಬದುಕನ್ನು ಆನಂದಿಸುತ್ತಾರೆ ಎನ್ನುವುದು ಚಿತ್ರದ ಕತೆಯಾಗಿದೆ.ಹೆಚ್ಚಾಗಿ ಅಂಗವಿಕಲರನ್ನು ಭೇಟಿಯಾದಾಗ ಅನುಕಂಪದ ದೃಷ್ಟಿಯಿಂದಲೇ ನೋಡುತ್ತೇವೆ. ಅವರ ಬದುಕು ಅಂಧಕಾರದಲ್ಲಿಯೇ ಅಡಗಿದೆ ಎಂದು ಭಾವಿಸುತ್ತೇವೆ. ಆದರೆ ಅವರ ಬದುಕಿನ ಸುಂದರಕ್ಷಣಗಳನ್ನು ಹಿಡಿದಿಡುವ ಚಿತ್ರ ಇದು. ಎಲ್ಲರಿಗೂ ಆತ್ಮೀಯವೆನಿಸುವ ಪಾತ್ರ ಎಂದೆಲ್ಲ ಪ್ರಿಯಾಂಕಾ ಹೇಳಿದ್ದಾರೆ.ಅನುರಾಗ್ ಬಸು ಅವರ ಈ ಚಿತ್ರ ಜುಲೈ 13ರಂದು ಬಿಡುಗಡೆಯಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.