ಕೊಪ್ಪಳ: ಅವರ ಮನೆ ಈಗ ಪಕ್ಷಿಧಾಮವೇ ಸರಿ. ಜಿಲ್ಲೆಯಲ್ಲಿ ಬರ ಬಿದ್ದಿದೆ. ನೀರಿನ ತೊಂದರೆ. ಇಂತಹ ಸಂದರ್ಭದಲ್ಲಿ ಬಾಯಾರಿ ಬರುವ ಪಕ್ಷಿಗಳಿಗಾಗಿ ತಮ್ಮ ಮನೆಯ ಮೇಲೆ 30ಕ್ಕೂ ಹೆಚ್ಚು ಪ್ಲಾಸ್ಟಿಕ್ಟ್ರೇಗಳಲ್ಲಿ ನೀರು ಇಟ್ಟಿರುತ್ತಾರೆ. ನೀರಿನ ದಾಹ ತೀರಿಸಿಕೊಳ್ಳಲು ಪಕ್ಷಿಗಳು ಇವರ ಮನೆಗಳಿಗೆ ದಾಳಿ ಇಡುತ್ತವೆ. ಹಿಂಡು ಹಿಂಡಾಗಿ ಬರುವ ಪಕ್ಷಿಗಳಿಂದ ಆ ಮನೆಯ ಪರಿಸರದಲ್ಲಿ ಈಗ ಹಕ್ಕಿಗಳ ಕಲರವ...

ಅಂದ ಹಾಗೆ ಅವರು ಯಾರು ಎಂಬುದನ್ನು ಹೇಳಲು ಮರೆತಿದ್ದೆ. ಇಂತಹ ಪಕ್ಷಿ ಪ್ರೇಮ ಮೆರೆಯುತ್ತಿರುವವರು ಇಲ್ಲಿನ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ.

ಜಿಲ್ಲಾಡಳಿತ ಭವನದ ಹಿಂದಿರುವ ತಮ್ಮ ಮನೆಯ ಮೇಲೆ ಪಕ್ಷಿಗಳಿಗಾಗಿ ನಿತ್ಯವೂ ನೀರನ್ನು ಇಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ರಾಜಾರಾಂ. ತಮ್ಮಂತೆ ಎಲ್ಲ ಅಧಿಕಾರಿಗಳು ಮನೆಗಳ ಮೇಲೆ ಟ್ರೇಗಳಲ್ಲಿ ನೀರಿಡುವ ಮೂಲಕ ಪಕ್ಷಿಗಳ ದಾಹ ತೀರಿಸುವಂತೆ ಮನವಿ ಮಾಡುವ ಮೂಲಕ ಪಕ್ಷಿ ಪ್ರೇಮವನ್ನೂ ಮೆರೆದಿದ್ದಾರೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಾಜಾರಾಂ, ಒಂದು ತಿಂಗಳ ಹಿಂದೆ ಮನೆಯಂಗಳದಲ್ಲಿ ಎರಡು ಹಕ್ಕಿಗಳು ಬಿದ್ದವು. ತುಂಬಾ ಸುಸ್ತಾಗಿ ಹೋಗಿದ್ದ ಆ ಪಕ್ಷಿಗಳ ವರ್ತನೆಯಲ್ಲಿ ಬಿಸಿಲಿನ ತಾಪದಿಂದ ಬಸವಳಿದದ್ದು ಕಂಡು ಬರುತ್ತಿತ್ತು. ಒಂದು ಕ್ಷಣ ಮನಸ್ಸು ಚುರ್ ಎಂದಿತು. ತಕ್ಷಣ ಎರಡು ಬಟ್ಟಲುಗಳಲ್ಲಿ ನೀರು ತಂದಿಟ್ಟೆ ಎಂದು ವಿವರಿಸಿದರು.

ನೀರು ಕುಡಿದ ತಕ್ಷಣ ಆ ಪಕ್ಷಿಗಳಲ್ಲಿ ಚೈತನ್ಯ ಬಂದಿತು. ರೆಕ್ಕೆಗಳು ಕಾದಿದ್ದವು. ಅವುಗಳ ಮೇಲೂ ನೀರು ಹಾಕಿದೆ. ಕಾದ ಇಸ್ತ್ರಿ ಪೆಟ್ಟಿಗೆ ಮೇಲೆ ಹಾಕಿದ ನೀರು ಇಂಗಿ ಹೋಗುವ ರೀತಿಯಲ್ಲಿ ಪಕ್ಷಿಗಳ ರೆಕ್ಕೆಗಳ ಮೇಲೆ ಹಾಕಿದ ನೀರು ಮಾಯವಾಯಿತು. ಇದು ಬಿಸಿಲಿನ ಪ್ರಖರತೆ, ಅವುಗಳಿಗಾದ ಆಯಾಸವನ್ನು ಮನವರಿಕೆ ಮಾಡಿಕೊಡುವಂತಿತ್ತು ಎಂದು ವಿವರಿಸಿದರು.

ಕೆಲ ಕ್ಷಣಗಳ ನಂತರ ಹಕ್ಕಿಗಳು ನವಚೈತನ್ಯ ಬಂದಂತೆ ಹಾರಿ ಹೋದವು. ಈ ಘಟನೆಯೇ ಮನೆ ಮೇಲೆ ಪಕ್ಷಿಗಳ ಸಲುವಾಗಿ ನೀರನ್ನು ಇಡುವಂತೆ ಪ್ರೇರೇಪಿಸಿತು ಎಂದೂ ವಿವರಿಸಿದರು.

`ಪಕ್ಷಿಗಳು ಕುಡಿಯದೇ ಉಳಿದ ನೀರನ್ನು ಪ್ರತಿ ದಿನ ತೆಗೆದು ಹಾಕಿ, ಹೊಸದಾಗಿ ನೀರನ್ನು ಇಡುತ್ತೇನೆ. ಕುಡಿಯದೇ ಉಳಿದ ಇಂತಹ ನೀರನ್ನು ಮನೆ ಮುಂದಿನ ಗಿಡಗಳಿಗೆ ಹಾಕುತ್ತೇನೆ~ ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ನೀರಿನ ಜೊತೆಗೆ ಅಕ್ಕಿ, ಅವಲಕ್ಕಿ ಮತ್ತಿತರ ತಿಂಡಿಗಳನ್ನು ಸಹ ಇಡುತ್ತೇನೆ ಎಂದು ಹೇಳಲು ಮರೆಯಲಿಲ್ಲ.

ಮನವಿ: ತಮ್ಮ ಮನೆಯ ಮೇಲೆ ಮಾಡಿರುವಂತೆಯೇ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡುವಂತೆ ರಾಜಾರಾಂ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ನೀರು ಸಿಗದೇ ಪಶು-ಪಕ್ಷಿಗಳು ಅಲ್ಲಲ್ಲಿ ಸತ್ತು ಬೀಳುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಅಗತ್ಯ. ಹೀಗಾಗಿ ತಮ್ಮ ವಸತಿಗೃಹಗಳ ಮುಂದೆ ಹಾಗೂ ಮಾಳಿಗೆ ಮೇಲೆ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಮಳೆಗಾಲ ಬರುವವರೆಗೆ ಹಾಗೂ ಬರ ಪರಿಸ್ಥಿತಿ ನಿವಾರಣೆಯಾಗುವವರೆಗೆ ಈ ವ್ಯವಸ್ಥೆ ಮಾಡುವಂತೆಯೂ ಸುತ್ತೋಲೆ ಮೂಲಕ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.