ಬಸವಾಪಟ್ಟಣ: ಭಕ್ತಿ ಭಂಡಾರಿ ಎಂದೇ ಪ್ರಸಿದ್ಧರಾಗಿದ್ದ ನಮ್ಮ ನಾಡಿನ ಹೆಮ್ಮೆಯ ದಾರ್ಶನಿಕ ಬಸವಣ್ಣ ಅವರು ಒಡೆದುಹೋಗಿದ್ದ ಭಾರತೀಯ ಸಮಾಜವನ್ನು ಕಾಯಕ ದಾಸೋಹದ ಮೂಲಕ ಒಂದುಗೂಡಿಸಿದ ಹರಿಕಾರ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಪ್ರಕಾಶ್ ಹಲಗೇರಿ ನುಡಿದರು.

ಇಲ್ಲಿ ಏರ್ಪಡಿಸಲಾಗಿದ್ದ ಬಸವಣ್ಣ ಅವರ 100ನೇ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
ಬಸವೇಶ್ವರರು 12ನೇ ಶತಮಾನದ ಒಬ್ಬ ಪ್ರಸಿದ್ಧ ಆರ್ಥಿಕ ತಜ್ಙ, ಸಾಮಾಜಿಕ ಹೋರಾಟಗಾರ, ತನ್ನ ಶ್ರೇಷ್ಠ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಎಲ್ಲರೂ ಭಾವೈಕ್ಯತೆಯಿಂದ ಜೀವಿಸುವ ರೀತಿಯನ್ನು ಕಲಿಸಿದ ಮಹಾನ್ಗುರು ಎಂದು ಪ್ರಕಾಶ್ ಹಲಗೇರಿ ನುಡಿದರು.

ಉಪನ್ಯಾಸಕಿ ಎಸ್.ಎಂ. ಗೌರಮ್ಮ ಮಾತನಾಡಿ, ಬಸವಣ್ಣ ಕೇವಲ ಪೂಜೆಗೆ ಸೀಮಿತವಾಗಬಾರದು. ಆತ ನೀಡಿರುವ ಅಮೂಲ್ಯ ವಚನಗಳಲ್ಲಿ ಅಡಗಿರುವ ತತ್ವಗಳನ್ನು ಅರ್ಥಮಾಡಿಕೊಂಡು, ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡಿಕೊಂಡಾಗ ಮಾತ್ರ ಇಂತಹ ಉತ್ಸವಗಳಿಗೆ ಒಂದು ಬೆಲೆ ಇದೆ ಎಂದು ನುಡಿದರು

ಕಾರ್ಯಕ್ರಮ ಉದ್ಘಾಟಿಸಿದ ಗವಿಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಾಪಟ್ಟಣ ಭಾವೈಕ್ಯದ ಸಂಗಮವಾಗಿದೆ. ಬಸವಣ್ಣನ ಹೆಸರಿನ ಈಗ್ರಾಮದಲ್ಲಿ ಇಂತಹ ಉತ್ಸವ ಸರ್ವಮಾನ್ಯ. ಬಸವಣ್ಣ ಅವರ ಆದರ್ಶ ಪಾಲನೆಯೊಂದಿಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಕೃಷಿ ಕಾಯಕದಲ್ಲಿ ಬಸವಣ್ಣಗಳನ್ನೂ ಸಾಕಿ ಬೆಳೆಸಿ, ಅವುಗಳ ಸಂಪೂರ್ಣ ಉಪಯೋಗ ಪಡೆಯಬೇಕೆಂದು ನುಡಿದರು.

ಬಸವ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಹೋಬಳಿಮಟ್ಟದ ಎತ್ತುಗಳ ಮೆರವಣಿಗೆಯಲ್ಲಿ ಸುತ್ತಲಿನ ಹಳ್ಳಿಗಳ ನೂರಾರು ರೈತರು ತಮ್ಮ ಎತ್ತುಗಳೊಂದಿಗೆ ಭಾಗವಹಿಸಿಸಿದ್ದರು.

ಉತ್ತಮ ವಾಗಿ ಬೆಳೆಸಲಾದ ಎತ್ತುಗಳ ಮಾಲೀಕರಾದ ಮಂಜಪ್ಪ ಚಿರಡೋಣಿ (ಪ್ರಥಮ ಬಹುಮಾನ), ಮಂಜಪ್ಪ ಕಂಸಾಗರ (ದ್ವಿತೀಯ ಬಹುಮಾನ), ಉಮೇಶ್ ದಾಗಿನಕಟ್ಟೆ (ತೃತೀಯ ಬಹುಮಾನ) ನೀಡಲಾಯಿತು. ವಚನ ಗಾಯಕರಾದ ಗಿರಿಜಮ್ಮ ಮಲ್ಲಪ್ಪ ಇವರಿಂದ ಬಸವಣ್ದಣ ಅವರ ವಚನ ಗಾಯನ ನಡೆಯಿತು. ಪ್ರಗತಿಪರ ರೈತ ಕೆ. ಮಂಜಪ್ಪ ಎತ್ತುಗಳ ಮೆರವಣಿಗೆಯನ್ನು ಉದ್ಘಾಟಿಸಿದರು.

ಎಸ್.ಜಿ. ದೊಡ್ಡಚನ್ನಪ್ಪ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಿ. ಹಾಲೇಶಪ್ಪ, ಬಸವಸಮಿತಿ ಅಧ್ಯಕ್ಷ ಡಾ.ಬಿ.ಎನ್. ರಂಗಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ. ಖಲಂದರ್, ಮಾಜಿ ಅಧ್ಯಕ್ಷ ಬಿ.ಜಿ. ಯೋಗೇಶ್, ಗುತ್ತಿಗೆದಾರ ಬಿ.ಜಿ. ಬಸವರಾಜ, ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಡಿ. ಬಸವರಾಜ, ಕಾರ್ಯದರ್ಶಿ ಎಂ.ಎಸ್. ಜಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿ. ರುದ್ರೇಶ್ ಸ್ವಾಗತಿಸಿದರು. ಎಲ್.ಜಿ. ಮಧುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎಜಾಜ್ ಅಹಮದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.