ಬೆಳಗಾವಿ: ಖಾಸಗಿ ಬಸ್‌ಗೆ ಬೆಂಕಿ ಹತ್ತಿಕೊಂಡ ಘಟನೆ ತಾಲ್ಲೂಕಿನ ಹಿರೇಬಾಗೇವಾಡಿ ಬಳಿಯ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬೆಳಗಾವಿಯ ಶಿವಾಜಿನಗರದ ಜೋರೆ ಕುಟುಂಬದವರು ಆರ್.ಆರ್. ಸಂಸ್ಥೆಗೆ ಸೇರಿದ ಬಸ್ ಬಾಡಿಗೆ ಪಡೆದು ಗದಗದಲ್ಲಿ ನಡೆದ ವಿವಾಹ ಮುಗಿಸಿಕೊಂಡು ಬೆಳಗಾವಿಗೆ ವಾಪಸ್ಸಾಗುತ್ತಿದ್ದರು.