ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಬಸ್ ದಿನದ ಅಂಗವಾಗಿ ಮಂಗಳವಾರ ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ.

ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೆಯ ಮದ್ರಾಸ್ ರಸ್ತೆ ಸೇರಿದಂತೆ ವಿವಿಧೆಡೆ ಹೆಚ್ಚುವರಿ ಬಸ್ಗಳನ್ನು ಸಂಚಾರಕ್ಕೆ ನಿಯೋಜಿಸಿದೆ.

ಹೊಸದಾಗಿ ಪರಿಚಯಿಸಿರುವ ಪ್ರಮುಖ ಮಾರ್ಗಗಳ ವಿವರ ಇಲ್ಲಿದೆ;
ಸಂಖ್ಯೆ ವಿ-356ಸಿಆರ್: ಯಶವಂತಪುರ ಬಸ್ ನಿಲ್ದಾಣದಿಂದ ಮೇಖ್ರಿ ವೃತ್ತ, ಶಿವಾನಂದ ಸ್ಟೋರ್ಸ್, ಕಾರ್ಪೊರೇಷನ್, ಶಾಂತಿನಗರ ಬಸ್ ನಿಲ್ದಾಣ, ಮಡಿವಾಳದ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೊ ಗೇಟ್ಗೆ 3 ಬಾರಿ ಸಾರಿಗೆ ಸೇವೆ ಆರಂಭಿಸಿದೆ.

ಸಂಖ್ಯೆ ವಿ-331ಜಿ: ಯಶವಂತಪುರ ಬಸ್ ನಿಲ್ದಾಣದಿಂದ ಮೇಖ್ರಿ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಹಲಸೂರು, ಬೆನ್ನಿಗಾನಹಳ್ಳಿ, ಮಹದೇವಪುರ, ಹೂಡಿ ಮಾರ್ಗವಾಗಿ ವೈಟ್ ಫೀಲ್ಡ್ ಟಿಟಿಎಂಸಿಗೆ 4 ಬಾರಿ ಬಸ್ ಸಂಚಾರ ಆರಂಭಿಸಲಾಗಿದೆ.

ವಜ್ರ ಸಂಖ್ಯೆ ವಿ-500ಕೆಇ : ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾಟರ್ಸ್ನಿಂದ ಕೆಂಗೇರಿ ಟಿಟಿಎಂಸಿ, ಪಂತರಪಾಳ್ಯ, ಕತ್ರಿಗುಪ್ಪೆ, ಬನಶಂಕರಿ ಬಸ್ ನಿಲ್ದಾಣ, ಸೆಂಟ್ರಲ್ ಸಿಲ್ಕ್ಬೋರ್ಡ್, ಅಗರ, ಮಾರತ್ಹಳ್ಳಿ ಬ್ರಿಡ್ಜ್, ಸತ್ಯಸಾಯಿ ಆಸ್ಪತ್ರೆ ಮಾರ್ಗವಾಗಿ ಐಟಿಪಿಎಲ್ಗೆ 10 ಟ್ರಿಪ್ಗಳಲ್ಲಿ ಬಸ್ಗಳು ಸಂಚರಿಸಲಿವೆ.

ಸಂಖ್ಯೆ 501-ಜಿಎ: ಅಗರ ಜಂಕ್ಷನ್ನಿಂದ, ಬನಶಂಕರಿ, ನಾಯಂಡಹಳ್ಳಿ ಜಂಕ್ಷನ್ ಮಾರ್ಗವಾಗಿ ಕೆಂಗೇರಿ ಟಿಟಿಎಂಸಿಗೆ 7 ಬಾರಿ ಬಸ್ಗಳು ಸಂಚರಿಸಲಿವೆ.

ಸಂಖ್ಯೆ 507-ಎ: ಚಿಕ್ಕಬಾಣಾವರದಿಂದ ಕೆ.ಆರ್.ಪುರಕ್ಕೆ 10 ಟ್ರಿಪ್ಗಳಿಗೆ ಬಸ್ಗಳು ಸೇವೆ ಒದಗಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.