ಚಿಕ್ಕಮಗಳೂರು:ಬಹುಜನ ವಿದ್ಯಾರ್ಥಿ ಸಂಘದ 4ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿದರು.ಹಳೆಯ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಎಂ.ಜಿ. ರಸ್ತೆಯ ಮೂಲಕ ಬೋಳರಾಮೇಶ್ವರ ದೇವಾಲಯದ ಆವರಣ ತಲುಪಿದರು.ಮಧ್ಯಾಹ್ನ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮ್ಮೇಳನವನ್ನು ಚಾಮರಾಜನಗರದ ನಾಗಸಿದ್ಧಾರ್ಥ ಹೊಲೆಯಾರ್ ಉದ್ಘಾಟಿಸಿದರು.

ಈ ಹಿಂದೆ ಅಸ್ಪೃಶ್ಯರು ನಡೆದಾಡುವಾಗ ದಾರಿ ಗುಡಿಸುವ ಸಲುವಾಗಿ ಅವರ ಬೆನ್ನಿಗೆ ಪೊರಕೆ ಕಟ್ಟಲಾಗುತ್ತಿತ್ತು. ಆಗ ಅದು ಅವಮಾನವೆಂದು ಯಾರಿಗೂ ಅನ್ನಿಸಿರಲಿಲ್ಲ.ಈಗ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ ಕಟ್ಟಿದಾಗ ಅಂದು ದಲಿತರು ಅನುಭವಿಸಿದ ನೋವು ಇಂದು ಕೆಲವರಿಗಾದರೂ ಅರ್ಥವಾಗುತ್ತಿದೆ ಎಂದು ಅವರು ನುಡಿದರು.

ಮೈಸೂರಿನ ಎನ್.ಮಹೇಶ್ ಭಾಷಣ ಮಾಡಿದರು.ಚಿತ್ರದುರ್ಗದ ಜಯಲಕ್ಷ್ಮಿ, ಮಂಗಳೂರಿನ ರಮೇಶ್, ಮುಖಂಡರಾದ ಎಂ.ಎನ್.ಚಿದಂಬರ್, ಪುಷ್ಪಾ, ನಾಗೇಶ್, ಕಿಶೋರ್ಕುಮಾರ್, ವಸಂತಿ, ಹರೀಶ್, ಅಭಿಲಾಷ, ಮಂಜುನಾಥ ಮತ್ತು ಯೋಗೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.