ಬ್ರಹ್ಮಾವರ: ಹಲವಾರು ಭರವಸೆಗಳ ಮರೀಚಿಕೆ ಬೆನ್ನಟ್ಟಿಕೊಂಡು ಎಂದೂ ಬಾರದ ಮಳೆಗೆ ಕಾದಂತೆ ಕಾರ್ಮಿಕರು ಇಲ್ಲಿ ಕಾದು ಕುಳಿತ್ತಿದ್ದಾರೆ. ಅವರ ಕನಸುಗಳು ನುಚ್ಚುನೂರಾಗಿವೆ. ಆಸೆಗಳು ಗರಿಗೆದರುವ ಮುನ್ನ ಮುದುಡಿ ಹೋಗಿವೆ.

ಇದು ಕರಾವಳಿ ಜಿಲ್ಲೆಗಳ ಏಕೈಕ ಬೃಹತ್ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಚ್ಚುಗಡೆಯಿಂದ ಬೀದಿ ಪಾಲಾದ ಕಾರ್ಮಿಕರ ಗೋಳು. ಕಾರ್ಮಿಕರ ಬಾಕಿ ವೇತನದ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರ ಗಾಳಿಗೆ ತೂರಿದ ಕಾರಣ ಕಾರ್ಮಿಕರ ದಿನಾಚರಣೆಯಾದ ಭಾನುವಾರ ಕಾರ್ಖಾನೆಯ 200 ಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ತಮಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸುವರು.

1984 ರಲ್ಲಿ ಕಾರ್ಖಾನೆ ಪ್ರಾರಂಭವಾದ ದಿನದಿಂದ ರಾಜ್ಯದ ಮೂಲೆ ಮೂಲೆಗಳಿಂದ ಬಂದ 200 ಕ್ಕೂ ಹೆಚ್ಚು ಕಾರ್ಮಿಕರು ಇಂದು ಇಲ್ಲಿ ಭವಿಷ್ಯದ ಬೇರನ್ನು ಅರಸುತ್ತಾ ಬಂದು ಇಂದು ಭವಿಷ್ಯದ ಬೇರನ್ನೇ ಕತ್ತರಿಸಿಕೊಂಡಿದ್ದಾರೆ.

ಕಾರ್ಖಾನೆ ಮುಚ್ಚಿದ ದಿನದಿಂದ ಇಂದಿನವರೆಗಿನ ಸುಮಾರು ಮೂರು ವರ್ಷಗಳಿಂದ ಕಾರ್ಖಾನೆಯಿಂದ ಯಾವುದೇ ಸಂಬಳ ಪಡೆಯದೇ ತಮ್ಮ ಜೀವನೋಪಾಯಕ್ಕಾಗಿ ವಿವಿಧ ಬ್ಯಾಂಕು, ಇನ್ನಿತರ ಸಂಸ್ಥೆಗಳಿಂದ ಸಾಲ ತೆಗೆದು ನಿರ್ಗತಿಕರಾಗಿದ್ದಾರೆ. ಕಳೆದ 2008ರಿಂದ ಕಾರ್ಖಾನೆ ಪುನರುಜ್ಜೀವನದ ಬಗ್ಗೆ ಆಶಾದಾಯಕ ಸಂಗತಿ ಸೃಷ್ಟಿಯಾಗಿದ್ದರೂ ಅವೆಲ್ಲಾ ಈಗ ಮರೀಚಿಕೆಯಾಗಿದೆ. ಕಾರ್ಮಿಕರ ಮುಖದಲ್ಲಿ ಒಂದು ರೀತಿಯ ಮೌನ ಆವರಿಸಿದೆ. ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

1985ರಲ್ಲಿ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿ 2001-02ನೇ ಇಸವಿ ವರೆಗೆ 1 ಲಕ್ಷದಿಂದ 15 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುತ್ತಾ ಬಂದಿತ್ತು. ಜಯಶೀಲ ಶೆಟ್ಟಿ ಆಡಳಿತಾವಧಿಯಲ್ಲಿ ರೈತರ ಕಬ್ಬಿನ ಹಣ ಪಾವತಿಸದೇ ಕಾರ್ಖಾನೆಯ ಕಬ್ಬು ಅರೆಯಲು ಬೇಕಾದ ಯಂತ್ರಗಳ ಬಿಡಿಭಾಗಗಳನ್ನು ಸಮಯಕ್ಕೆ ಸರಿಯಾಗಿ ತರಿಸದೇ ಕಾರ್ಖಾನೆಯ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಕಬ್ಬು ಅರೆಯುವ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸಿದರು ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, 2010ರ ಅಗಸ್ಟ್ 28ರಂದು ಕಾರ್ಮಿಕರ ಬಾಕಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ಮುಂದಿನ ಆರು ತಿಂಗಳಲ್ಲಿ 6 ಕಂತುಗಳಲ್ಲಿ ನೀಡಲು ಆದೇಶ ಕೂಡಾಬಂತು. ಆದರೆ ಇದುವರೆಗೆ ಕಾರ್ಮಿಕರ ಬಾಕಿ ಹಣ ಪಾವತಿಯಾಗಿಲ್ಲ.

ಏಳು ಬೀಳುಗಳು: 2008 ರಲ್ಲಿ ರಮಣಿ ಗ್ರೂಫ್ ಕಾರ್ಖಾನೆಯನ್ನು 30 ವರ್ಷಗಳಿಗೆ ಲೀಸ್ ಪಡೆದು ಮುನ್ನಡೆಸಲು ಮುಂದಾದಾಗ ಸುಮಾರು 220ಕ್ಕೂ ಹೆಚ್ಚು ಕಾರ್ಮಿಕರ ಮುಖದಲ್ಲಿ ಮಂದಹಾಸ ಬೀರಿತ್ತು.

ನಂತರ ಏಕಾಏಕಿ ರಮಣಿ ಗ್ರೂಪ್ ಕಾರ್ಖಾನೆ ನಡೆಸಲು ಹಿಂಜರಿಯಿತು. 2010 ರಲ್ಲಿ ಆಂದ್ರ ಪ್ರದೇಶದ ಕಂಪೆನಿಯೊಂದಿಗೆ ಕೂಡಿ ಕಾರ್ಖಾನೆ ನಡೆಸಲು ಮುಂದೆ ಬಂತು. ಜನವರಿಯಲ್ಲಿ ಕಾರ್ಮಿಕರ 1 ಕೋಟಿ 40 ಲಕ್ಷ ಬಾಕಿ ಹಣವನ್ನು ಶೀಘ್ರದಲ್ಲೇ ನೀಡುವ ಭರವಸೆ ನೀಡಿತು. ಆದರೆ ಕೆಲವೇ ತಿಂಗಳಿನಲ್ಲಿ ರಮಣಿ ಗ್ರೂಪ್ ಕಾರ್ಖಾನೆ ನಡೆಸಲು ಪುನಃ ಹಿಂಜರಿಯಿತು.

ಕಳೆದ ವರ್ಷ ಆಂದ್ರ ಮೂಲದ ಇನ್ನೊಂದು ಕಂಪೆನಿ ನಡೆಸಲು ಮುಂದಾಗಿದೆ ಎನ್ನುವ ಮಾತು ಜನಪ್ರತಿನಿಧಿಗಳಿಂದ ಕೇಳಿ ಬಂತು. ಆಗ ಕೂಡಾ ಕಾರ್ಮಿಕರಲ್ಲಿ ಆಸೆ ಚಿಗುರೊಡೆಯಿತು. ಆದರೆ ಅದೂ ಸಹ ಕೆಲವೇ ತಿಂಗಳುಗಳಲ್ಲಿ ಮುರುಟಿತು. ಹೀಗೆ ಕಾರ್ಮಿಕರ ಜೀವನದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಹೇಳುತ್ತಾರೆ ಸಕ್ಕರೆ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಭಾಸ್ಕರ್ ಶೆಟ್ಟಿ.

ಬಿಕೊ ಎನ್ನುವ ವಸತಿ ಗೃಹಗಳು: ಕಾರ್ಖಾನೆಯಲ್ಲಿ ಸುಮಾರು 48 ವಸತಿಗೃಹಗಳಿದ್ದರೂ ಪ್ರಸ್ತುತ ವಸತಿಗೃಹಗಳಲ್ಲಿ ಕೇವಲ 13 ಕುಟುಂಬಗಳು ವಾಸಿಸುತ್ತಿವೆ. ನೀರು, ವಿದ್ಯುತ್ ಮುಂತಾದ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದರೂ ಕಾರ್ಖಾನೆ ಪುನರುಜ್ಜೀವನದ ಆಸೆ ಹೊತ್ತು ದಿನ ದೂಡುತ್ತಿದ್ದಾರೆ.

ಮಕ್ಕಳ ಭವಿಷ್ಯದ ಚಿಂತೆ : ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸ್ಥಿತಿಯಲ್ಲೂ ಇವರಿಲ್ಲ. ಸರಿಯಾದ ಸಂಬಳ ಸಿಗದೇ ದಿನದೂಡಲು ಕಷ್ಟದಾಯಕವಾಗಿರುವಾಗ, ಅಲ್ಲಿ ಇಲ್ಲಿ ಕೂಲಿ ಮಾಡಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲ್ಲೇ ಜೀವನ ದೂಡುತ್ತಿದ್ದಾರೆ. ಮಕ್ಕಳೂ ಸಹ ಚಿಮಣಿ ದೀಪದಡಿಯಲ್ಲಿಯೇ ಕುಳಿತು ತಮ್ಮ ಭವಿಷ್ಯ ರೂಪಿಸುತ್ತಿದ್ದಾರೆ. ಈ ರೀತಿಯಾಗಿ ಮಕ್ಕಳ ಭವಿಷ್ಯವೂ ಅಂಧಕಾರದಲ್ಲಿ ಮುಳುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.