ಶನಿವಾರ, ಮೇ 8, 2021
27 °C

ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ವಿಜೇಂದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬೀಜಿಂಗ್ ಒಲಿಂಪಿಕ್ ಕೂಟದ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ಮನ್‌ಪ್ರೀತ್ ಸಿಂಗ್ ಲಂಡನ್ ಒಲಿಂಪಿಕ್ ಕೂಟದ ಅರ್ಹತಾ ಹಂತದ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಕಜಕಸ್ತಾನದ ಅಸ್ತಾನದಲ್ಲಿ ನಡೆಯುತ್ತಿರುವ ಟೂರ್ನಿಯ 75 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ವಿಜೇಂದರ್ 11-5 ರಲ್ಲಿ ಸಿರಿಯಾದ ಇಶಾಕ್ ವಾಯೆಜ್ ವಿರುದ್ಧ ಗೆಲುವು ಪಡೆದರು. ಎಂಟರಘಟ್ಟದ ಪಂದ್ಯದಲ್ಲಿ ಅವರು ಮಂಗೋಲಿಯದ ಚುಲುಂತುಮರ್ ತುಮುರ್ಕುಯಾಗ್ ವಿರುದ್ಧ ಪೈಪೋಟಿ ನಡೆಸುವರು.91 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಮನ್‌ಪ್ರೀತ್ ಮಂಗೋಲಿಯದ ತೌಲ್ಯೆಕ್ ಯೆರ್ಬಲೊತ್ ಅವರನ್ನು ಮಣಿಸಿದರು. ಏಕಪಕ್ಷೀಯವಾಗಿ ಕೊನೆಗೊಂಡ ಸ್ಪರ್ಧೆಯಲ್ಲಿ ಮನ್‌ಪ್ರೀತ್ ಕೇವಲ ಒಂದು ನಿಮಿಷ 46 ಸೆಕೆಂಡ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಒಲಿಂಪಿಕ್‌ಗೆ ಅರ್ಹತೆ ಪಡೆಯಲು ಮನ್‌ಪ್ರೀತ್‌ಗೆ ಇಲ್ಲಿ ಚಿನ್ನದ ಪದಕ ಗೆಲ್ಲುವುದು ಅಗತ್ಯ.ಭಾರತದ ಸುರಂಜಯ್ ಸಿಂಗ್ (52 ಕೆ.ಜಿ. ವಿಭಾಗ) ಮತ್ತು ಸುಮಿತ್ ಸಂಗ್ವಾನ್ (81 ಕೆ.ಜಿ) ಅವರು ಗುರುವಾರ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.