ಮೆಲ್ಬರ್ನ್ (ಎಎಫ್‌ಪಿ): ನಾಯಕ ರಿಕಿ ಪಾಂಟಿಂಗ್ ಭಾನುವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಆ್ಯಷಸ್ ಕ್ರಿಕೆಟ್ ಸರಣಿಯ ‘ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
ಕಿರು ಬೆರಳಿಗೆ ಗಾಯ ಮಾಡಿಕೊಂಡಿದ್ದ ಪಾಂಟಿಂಗ್ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪರ್ತ್‌ನಲ್ಲಿ ನಡೆದ ಮೂರನೇ ಟೆಸ್ಟ್ ವೇಳೆ ಈ ಗಾಯ ಆಗಿತ್ತು. ಆದರೆ ಗುರುವಾರ ಅಭ್ಯಾಸದ ಬಳಿಕ ಆಡುವ ಸಾಧ್ಯತೆ ಹೆಚ್ಚಿದೆ. ಈ ವಿಷಯವನ್ನು ಸ್ವತಃ ಪಾಂಟಿಂಗ್ ತಿಳಿಸಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿದ್ದು 1-1 ಸಮಬಲವಾಗಿದೆ. ಹಾಗಾಗಿ ನಾಲ್ಕನೇ ಟೆಸ್ಟ್ ಕುತೂಹಲ ಕೆರಳಿಸಿದೆ.
ಅಕಸ್ಮಾತ್ ಪಾಂಟಿಂಗ್ ಲಭ್ಯವಾಗದಿದ್ದರೆ ಕಷ್ಟ ಎಂಬ ಕಾರಣ ಸೌತ್ ವೇಲ್ಸ್‌ನ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಅವರನ್ನು ಈಗಾಗಲೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.