ಭಾನುವಾರ, ಮೇ 9, 2021
27 °C

ಬಾಕ್ಸಿಂಗ್: ರಾಹುಲ್ ಬೆಳ್ಳಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿನ್ನದ ಪದಕ ಜಯಿಸುವ ಆಸೆಯನ್ನು ನಿರಾಸೆಗೊಳಿಸಿದ ರಾಹುಲ್ ಪೂನಿಯಾ ಸಿಂಗಪುರದಲ್ಲಿ ನಡೆದ ಯೂತ್ ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.ಸೋಮವಾರ ನಡೆದ 49 ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ರಾಹುಲ್ 6-13 ಪಾಯಿಂಟ್‌ಗಳಿಂದ ಇಂಗ್ಲೆಂಡ್‌ನ ಜಾಕ್ ಬಾಟೆಸನ್ ಎದುರು ಸೋಲು ಕಂಡು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟರು. ಈ ಮೂಲಕ  ಕ್ರೀಡಾಕೂಟದಲ್ಲಿ ಈ ಸಲ ಬೆಳ್ಳಿ ಜಯಿಸಿದ ಏಕೈಕ ಭಾರತದ ಸ್ಪರ್ಧಿ ಎನಿಸಿದರು.ಉತ್ತಮ ಆರಂಭ ಪಡೆದ ಜಾಕ್ ಇನ್ನೂ ಹೆಚ್ಚು ಅಂತರದಿಂದ ಗೆಲ್ಲುವ ಸಾಧ್ಯತೆ ಇತ್ತು. ಆದರೆ ರಾಹುಲ್ ಅದಕ್ಕೆ ಅವಕಾಶ ನೀಡಲಿಲ್ಲ ಎನ್ನುವುದಷ್ಟೇ ಸಮಾಧಾನ. ರಾಷ್ಟ್ರೀಯ ಚಾಂಪಿಯನ್ ಸುರೇಂದರ್ ಸಿಂಗ್ ಸಹ ಇದೇ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡು ಕಂಚಿನ ಪದಕ ಜಯಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.