ಗುರುವಾರ , ಮೇ 13, 2021
16 °C

ಬಾತ್ರಾ ವಿರುದ್ಧ ಕಿರುಕುಳ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಿರುಕುಳ ಹಾಗೂ ಅವಮಾನ ಮಾಡಿದ್ದಾರೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರೇಖಾ ಭಿಡೆ ಆರೋಪಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಭಿಡೆ ಅವರು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದಾರೆ. `ಬಾತ್ರಾ ಅವರ ವಿಚಾರಗಳಿಗೆ ತಲೆದೂಗಲು ನಿರಾಕರಿಸಿದ್ದರಿಂದ ಕಿರುಕುಳ ಹಾಗೂ ಅವಮಾನ ಮಾಡಲಾಗಿತ್ತು. ಹಾಕಿ ಇಂಡಿಯಾದ ಕೆಲ ಅಧಿಕಾರಿಗಳಿಂದ ನನಗಾದ ಕಿರುಕುಳವನ್ನು ತಾಳಲಾರದೆ ಈ ಪತ್ರ ಬರೆಯುತ್ತಿದ್ದೇನೆ' ಎಂದೂ ಅವರು ಬರೆದಿದ್ದಾರೆ.ಆದರೆ ಭಿಡೆ ಅವರಿಗೆ ಕಿರುಕುಳ ನೀಡಲಾಗಿತ್ತು ಎಂಬ ಆರೋಪವನ್ನು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಅಲ್ಲಗಳೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.