ಬಹು ದಿನಗಳ ಬಳಿಕ ಸದ್ದಿಲ್ಲದೇ ಚಿತ್ರ ನಿರ್ದೇಶನಕ್ಕೆ ಇಳಿದಿರುವ ದಿನೇಶ ಬಾಬು, ‘ಪ್ರಿಯಾಂಕ’ ಸಿನಿಮಾ ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಹಲವು ಅನಿವಾರ್ಯ ಕಾರಣಗಳಿಂದ ಇಷ್ಟು ದಿನ ಸುಮ್ಮನಿದ್ದೆ ಎಂದಷ್ಟೇ ಹೇಳುವ ಬಾಬು, ತಮ್ಮ ಸಿನಿಮಾ ಮಾತಾಡಲಿದೆ ಎಂದು ಪ್ರತಿಕ್ರಿಯಿಸುತ್ತಾರೆ.

ಸೆನ್ಸಾರ್ ಅರ್ಹತಾ ಪತ್ರ ಗಿಟ್ಟಿಸಿಕೊಂಡ ಬಳಿಕ, ಸಿನಿಮಾವನ್ನು ಫೆ. 5ರಂದು ಬಿಡುಗಡೆ ಮಾಡುವ ಕುರಿತು ಮಾಹಿತಿ ಹಂಚಿಕೊಳ್ಳಲು ಸುದ್ದಿಮಿತ್ರರನ್ನು ಆಹ್ವಾನಿಸಲಾಗಿತ್ತು. ಹಾಡುಗಳ ಪ್ರದರ್ಶನ ಕೂಡ ಇತ್ತು.

ಕೊಲೆಯೊಂದರ ಸುತ್ತಮುತ್ತ ನಡೆಯುವ ಕಥೆ ಇದಂತೆ. ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ಅಧಿಕಾರಿಯಾಗಿ ವೀಣಾ ಸುಂದರ್ ಇದ್ದಾರೆ. ‘ನೈಜ ಘಟನೆಯಿಂದ ಪ್ರೇರಣೆ ಪಡೆದು, ಚಿತ್ರಕತೆಯನ್ನು ಮಾಡಿದ್ದೇನೆ. ವಿವಾಹಿತ ಮಹಿಳೆ ಹಿಂದೆ ಬೀಳುವ ಯುವಕನೊಬ್ಬ ಆಕೆಯನ್ನು ಪಡೆಯಲು ಏನು ಮಾಡುತ್ತಾನೆ ಎಂಬುದು ಕಥೆಯ ತಿರುಳು’ ಎಂದಷ್ಟೇ ಬಾಬು ಸುಳಿವು ಬಿಟ್ಟುಕೊಟ್ಟರು.

ಮೂರೂವರೆ ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ನಿವೃತ್ತ ಡಿಜಿಪಿ ಗೋಪಾಲ್ ಹೊಸೂರು, ಈ ಸಿನಿಮಾ ನೋಡಿದ್ದಾರಂತೆ. ಅವರ ಅಭಿಪ್ರಾಯದ ಪ್ರಕಾರ, ‘ಪ್ರಿಯಾಂಕ’ ಸಿನಿಮಾದಲ್ಲಿ ರೊಮ್ಯಾಂಟಿಕ್, ಕೊಲೆ ತನಿಖೆ ಹಾಗೂ ನ್ಯಾಯಾಂಗ ವಿಚಾರಣೆಯ ಮೂರು ಹಂತಗಳು ಇವೆ. ‘ಅವುಗಳನ್ನು ಬಾಬು ಎಷ್ಟು ಚೆಂದದಿಂದ ಜೋಡಿಸಿದ್ದಾರೆ’ ಎಂದು ಹೊಸೂರು ಖುಷಿಪಟ್ಟರು. ಹಿರಿಯ ವಕೀಲ ವೆಂಕಟೇಶ ಭಗತ್, ‘ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವ ಇದು ರಿಯಲಿಸ್ಟಿಕ್ ಸಿನಿಮಾ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶ್ರೀಮತಿ’ ಹಾಗೂ ‘ಕ್ರೇಜಿಲೋಕ’ ಸಿನಿಮಾಗಳ ಬಳಿಕ ಯಾವ ತರಹದ ಪಾತ್ರ ಒಪ್ಪಿಕೊಳ್ಳಬೇಕು ಎಂಬ ಗೊಂದಲದಲ್ಲಿ ಪ್ರಿಯಾಂಕ ಮುಳುಗಿದ್ದರಂತೆ. ‘ದಿನೇಶ್ ಬಾಬು ಈ ಪಾತ್ರದ ಆಹ್ವಾನ ನೀಡಿದಾಗ ಒಲ್ಲೆ ಅನ್ನಲು ಆಗಲಿಲ್ಲ. ಸಿನಿಮಾ ನೋಡಿದ ಮೇಲೆ ನನ್ನ ನಿರ್ಧಾರ ಸರಿಯಾಗಿದೆ ಅನಿಸಿತು’ ಎಂದು ಪ್ರಿಯಾಂಕ ಹೇಳಿಕೊಂಡರು. ಕಿರುತೆರೆಗಳಲ್ಲಿ ಹಲವು ಸಲ ಪೊಲೀಸ್ ಅಧಿಕಾರಿಯಾಗಿದ್ದ ವೀಣಾ ಸುಂದರ್, ‘ಸಿನಿಮಾದಲ್ಲಿ ಆ ಥರದ ಪಾತ್ರ ಮಾಡುವುದು ನನ್ನ ಕನಸು ಆಗಿತ್ತು. ಬಾಬು ಅದಕ್ಕೆ ಅವಕಾಶ ಕೊಟ್ಟರು’ ಎಂದು ಸಂತಸ ಹಂಚಿಕೊಂಡರು.

‘ಸಾವಿರಾರು ಜನರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಇದು ನನ್ನ ವೃತ್ತಿ ಜೀವನದ ತಿರುವು’ ಎಂದು ಕೃಪಾಕರ ಹೇಳಿದರು. ನಿರ್ಮಾಪಕ ಎ.ಮೋಹನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.