ಭಾನುವಾರ, ಜನವರಿ 19, 2020
28 °C

ಬಾರ್ ಮೇಲೆ ದಾಳಿ: 30 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು : ನಗರದ ಬ್ರಿಗೆಡ್ ರಸ್ತೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಒಂದರ ಮೇಲೆ ಅಶೋಕ್‌ನಗರ ಪೊಲೀಸರು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ 30 ಜನರನ್ನು ಬಂಧಿಸಿದ್ದಾರೆ.ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ಗಾರ್ಡನ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಲೈವ್ ಬ್ಯಾಂಡ್ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ರಾತ್ರಿ 9.30 ಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ನೃತ್ಯ ಮಾಡುತ್ತಿದ್ದ 14 ಯುವತಿಯರನ್ನು ಹಾಗೂ ಬಾರ್‌ನ ಮಾಲೀಕ ಮನೋಹರ್ ಸೇರಿದಂತೆ 16 ಜನ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಇನ್ಸ್‌ಪೆಕ್ಟರ್ ಜಗದೀಶ್ ಮಾಹಿತಿ ನೀಡಿದರು.ಬಾರ್ ಮತ್ತು ರೆಸ್ಟೋರೆಂಟ್ ಎಂದು ಲೈಸೆನ್ಸ್ ಪಡೆದಿದ್ದ ಮಾಲೀಕ ಅಕ್ರಮವಾಗಿ ಲೈವ್‌ಬ್ಯಾಂಡ್ ನಡೆಸುತ್ತಿದ್ದ. ದಾಳಿ ವೇಳೆ ಸಿಡಿ ಪ್ಲೇಯರ್ ಹಾಗೂ ಧ್ವನಿ ವರ್ಧಕಗಳನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದರು.

ಪ್ರತಿಕ್ರಿಯಿಸಿ (+)